Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ಪುತ್ತನಪುರದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಗುಂಡ್ಲುಪೇಟೆ : ತಾಲ್ಲೂಕಿನ ಪುತ್ತನಪುರ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಾನಾ ಸರಕಾರಿ ಹಾಗೂ ಅರೇ ಸರಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಮಗೂ ಹಕ್ಕಿದೆ ನಾಗರೀಕರ ಸಬಲೀಕರಣದ ಕಾನೂನು ಅರಿವು ನೆರವು ಕಾಯ೯ಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸ೦ಪನ್ಮೂಲ ವ್ಯಕ್ತಿಯಾಗಿ ವಕೀಲರಾದ ಹಂಗಳ ಸಿದ್ದೇಶ್ ಭಾಗವಹಿಸಿ ರಾಜ್ಯದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಭಾರತದ ಪ್ರತಿಯೊಬ್ಬ ಪ್ರಜೆಯ ಸಹ ಕಾನೂನಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ಪ್ರತಿಯಾಬ್ಬ ವ್ಯಕ್ತಿಯ ಆದ್ಯ ಕರ್ತವ್ಯ ಹಿಂದೂ ವಿವಾಹ  . ವಿವಾಹ ವಿಚ್ಚೇದನ, ಜೀವನಾಂಶ ಎಂಬ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು, ವಿವಾಹಕ್ಕೆ ಸಂಬಂಧಿಸಿದಂತೆ ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ  ಕ್ರೈಸ್ತ ಪಾಸಿ ೯ ಹಾಗೂ ಯಹೂದಿ ಮುಂತಾದ ಧಮ೯ ದವರಿಗೆ ಬೇರೆ ಬೇರೆ ಕಾನೂನು ಇದೆ, ಹಿಂದೂ ವಿವಾಹ ಅಧಿನಿಯಮ 1955ರ ಪ್ರಕಾರ ಮದುವೆಯ ಸಮಯದಲ್ಲಿ ವರನಿಗೆ 21 ಮತ್ತು ವಧುವಿಗೆ 18 ವಷ೯ ತುಂಬಿರಬೇಕು ಹಾಗೂ ತಮ್ಮ ಜಾತಿಯಲ್ಲಿ ಅನುಸರಿಸಿಕೊಂಡು ಬಂದ ರೂಡಿ ಮತ್ತು ಸಂ ಪ್ರದಾಯಕ್ಕನುಗುಣವಾಗಿ ಮದುವೆಯಾದಲ್ಲಿ ಅದು ಕಾನೂನು ಸಮ್ಮತ ವಿವಾಹ ಎಂದು ತಿಳಿಸಲಾಯಿತು / ವಿವಾಹ ವಿಚ್ಚೇದನ ಬಗ್ಗೆ ಹೇಳಲಾಗಿ ವಿವಾಹ ದಂಪತಿಗಳು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಪರಸ್ಪರ ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಮುಂದೆ ಅವರು ದಂಪತಿಗಾಗಿ ಇರಲು ಸಾಧ್ಯವೇ ಇಲ್ಲ ಎನ್ನುವ ಸಮಯದಲ್ಲಿ ವಿವಾಹ ವಿಚ್ಚೇದನಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಆದರೆ ವಿವಾಹ ವಿಚ್ಛೇದನಕ್ಕೆ ಅರ್ಜಿಯನ್ನು ಮದುವೆಯಾದ ದಿನದಿಂದ ಒಂದು ವರ್ಷದ ಅವಧಿ ಒಳಗಾಗಿ ಸಲ್ಲಿಸುವಂತ್ತಿಲ್ಲ ಎಂದು ತಿಳಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೇಬಿ ಉಪಾಧ್ಯಕ್ಷರಾದ ಚಿಕ್ಕಹನುಮಮ್ಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಮಹದೇವಯ್ಯ ಸದಸ್ಯರಾದ ಹoಗಳ ಪ್ರರದ ಸುರೇಶ್ ದೊಡ್ಡ ರಾಜು ರಂಗಶೆಟ್ಟಿ ಶಾಲೆಯ ಮುಖ್ಯ ಉಪಾಧ್ಯಯರು  ಶಿಕ್ಷಕರು ಮಕ್ಕಳು  ಮುಂತಾದವರು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!