Mysore
24
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

ನಾವಿನ್ಯತೆಯ ಕೌಶಲ್ಯಗಳನ್ನು ಕಲಿಯುವುದು ಇಂದಿನ ವಿದ್ಯಾರ್ಥಿಗಳಿಗೆ ಅನಿವಾರ್ಯ : ಪ್ರೊ.ಸಾಯಿನಾಥ ಮಲ್ಲಿಗೆಮಾಡು

ಮೈಸೂರು : ನಗರದ ಎಂ.ಎಂ.ಕೆ. ಮತ್ತು ಎಸ್‌.ಡಿ.ಎಂ. ಮಹಿಳಾ ಮಹಾವಿದ್ಯಾಲಯದಲ್ಲಿ ಇಂದು ಗಣಕ ವಿಜ್ಞಾನ ವಿಭಾಗ ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಐ ಸಿ ಟಿ ಅಕಾಡೆಮಿ ಸಹಯೋಗದಲ್ಲಿ ಸಿಎಸ್‌ಆರ್ – ಫೆಡೆಕ್ಸ್ ಕಾರ್ಯಕ್ರಮದ ಅಂಗವಾಗಿ “ಮಹಿಳಾ ಸಬಲೀಕರಣ ಕಾರ್ಯಕ್ರಮ” ವನ್ನು ಆಯೋಜಿಸುವ ಮೂಲಕ  ಮಾಹಿತಿ ತಂತ್ರಜ್ಞಾನದ-ಪೈಥಾನ್‌ ಪ್ರೋಗ್ರಾಮಿಂಗ್ ಬಳಕೆ ಮತ್ತು ಅವಕಾಶಗಳ ಕುರಿತು ಸರ್ಟಿಫಿಕೇಟ್ ಕೋರ್ಸ್‌ನ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಅವರು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ವಿಶ್ವದ ವಿದ್ಯಮಾನವನ್ನು ತಿಳಿಯಲು ಈ ರೀತಿಯ ಕಾರ್ಯಗಾರಗಳಲ್ಲಿ ಭಾಗವಹಿಸಬೇಕು. ಈ ಮೂಲಕ  ಹೊಸ ನಾವಿನ್ಯತೆಯ ಕೌಶಲ್ಯಗಳನ್ನು ಕಲಿಯುವುದು ಅನಿವಾರ್ಯವಾಗಿದೆ. ಇದರಿಂದ  ಮುಂದೆ ಅತ್ಯುತ್ತಮ ಉದ್ಯೋಗ ಅವಕಾಶಗಳು ಪಡೆಯಲು ಸಾಧ್ಯವಾಗುತ್ತದೆ ಈ ಉದ್ದೇಶದಿಂದಾಗಿ ಕಾಲೇಜಿನ ಬಿ.ಸಿ.ಎ. ವಿದ್ಯಾರ್ಥಿಗಳಿಗೆ ನೂರು ಗಂಟೆಗಳು ತರಬೇತಿಯನ್ನು ರಾಜ್ಯದ ಐ.ಸಿ.ಟಿ.ಕೋಶದೊಂದಿಗೆ ಆಯೋಜಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಐ.ಸಿ.ಟಿ.ಸಂಸ್ಥೆಯ ಮುಖ್ಯಸ್ಥ ಡಾ ವಿಷ್ಣು ಪ್ರಸಾದ್, ಅವರು ಮಾತನಾಡಿ ಪೈಥಾನ್ ಜನಪ್ರಿಯ ಸಾಮಾನ್ಯ ಉದ್ದೇಶದ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು ಈ ತಂತ್ರಜ್ಞಾನದ ಅನುಕೂಲತೆಗಳು ಯಂತ್ರ ಕಲಿಕೆ, ಡೇಟಾ ವಿಜ್ಞಾನ, ವೆಬ್ ಅಭಿವೃದ್ಧಿ, ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳು ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಬಿ.ಸಿ.ಎ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಈ ತಂತ್ರಜ್ಞಾನದ ಮಹತ್ವವನ್ನು ಅರಿತುಕೊಳ್ಳಬೇಕಿದೆ ಎಂದು ಕರೆ ನೀಡಿದರು.  ಐಸಿಟಿ ಅಕಾಡೆಮಿಯ ಶ್ರೀ ಮೊಹಮ್ಮದ್ ಯಾಸಿನ್ ಶಾಭಾಜ್, ಶ್ರೀ ಪ್ರಜ್ವಲ್ ಎಸ್ ವಸಿಷ್ಠ ಕಾರ್ಯಕ್ರಮ ಸಂಯೋಜಕಿ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕೆ ಎಸ್ ಸುಕೃತಾ ಮತ್ತು ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ