ಮೈಸೂರು : ‘ಆಂದೋಲನ 50 ಸಾರ್ಥಕ ಪಯಣ’ದ ಪ್ರಯುಕ್ತ ‘ಆಂದೋಲನ’ ದಿನಪತ್ರಿಕೆಯ ವತಿಯಿಂದ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಆಂದೋಲನ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಥಮ ಸ್ಥಾನಗಳಿಸಿದ ವಿನೋದ್ ಕುಮಾರ್ ಪರವಾಗಿ ಅವರ ಪತ್ನಿ ಅಲುಮೇಲು ಅವರು ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ಆಂದೋಲನ ಕಚೇರಿಯಲ್ಲಿ ಸ್ವೀಕರಿಸಿದರು. ವನ್ಯಜೀವಿ ಛಾಯಾಗ್ರಾಹಕರಾದ ದಿನೇಶ್ ಬಸವಾಪಟ್ಟಣ ಮತ್ತು ಛಾಯಾ ಸುನೀಲ್ ಅವರು ಬಹುಮಾನ ನೀಡಿದರು.
ಸ್ಪರ್ಧೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಎರಡು ಸಮಾಧಾನಕರ ಬಹುಮಾನಗಳನ್ನು ಘೋಷಣೆ ಮಾಡಲಾಗಿತ್ತು.