ಮೈಸೂರು: ನಗರದ ವಿ.ವಿ.ಮೊಹಲ್ಲಾ ನಿವಾಸಿ, ಸಮಾಜ ಸೇವಕರಾದ ಜಿ.ಪಿ.ಸತೀಶ್ ಅವರ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಸೇವೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರ ಬರೆದಿದ್ದಾರೆ. ಕರ್ತವ್ಯ ಕಾಲವೇ ಅಮೃತ ಘಳಿಗೆ, ಭೂತ ಕಾಲವು ಪರಿಮಿತವಾದುದು, ಭವಿಷ್ಯ ಕಾಲ ಅಪರಿಮಿತವಾದುದು, ರಾಷ್ಟ್ರ ಯಾವಾಗಲೂ ಮೊದಲು ನಿಮ್ಮ ಪ್ರಯತ್ನಗಳು ನಮ್ಮ ರಾಷ್ಟ್ರ ಮತ್ತು ಪ್ರಗತಿಯನ್ನು ಪ್ರಜ್ವಲಿಸುವತ್ತ ನಿರಂತರವಾಗಿರಲಿ ಎಂದು ಪತ್ರದಲ್ಲಿ ಹಾರೈಸಿದ್ದಾರೆ.
೨೦೨೩ನೇ ವರ್ಷವು ಸಕಾರಾತ್ಮಕ ಬದಲಾವಣೆಗಳು, ಗುರಿ ಮತ್ತು ಯಶಸ್ಸಿನ ಮರೆಯಲಾಗದ ವರ್ಷವಾಗಿರಲೆಂದು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ. ಸತೀಶ್ ಅವರು ಈ ಹಿಂದೆ ಸುಮಾರು ೨೦ ವರ್ಷಗಳಿಗೂ ಹೆಚ್ಚು ಕಾಲ ನಗರದ ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ಬೆರಳಚ್ಚುಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.