ಹನೂರು :ತಾಲ್ಲೂಕಿನ ಮಾಲಿಂಗನತ್ತ ಗ್ರಾಮದಲ್ಲಿ ಸೆಸ್ಕ್ ಅಧಿಕಾರಿಗಳು ಕ್ರಮ ಕೈಗೊಂಡ ಪರಿಣಾಮ ಅಂತೂ ಇಂತೂ ನಿರಂತರ ವಿದ್ಯುತ್ ಯೋಜನೆಯಡಿ ವಿದ್ಯುತ್ ಪೂರೈಸಲಾಗಿದೆ.
ಸೋಮವಾರ ಮಾಲಿಂಗನತ್ತ ಗ್ರಾಮದ ಮೂಲಕ ಇತರೆ ಗ್ರಾಮಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಡಿ ಪೂರೈಕ ಮಾಡಲಾಗುತ್ತಿದೆ. ಆದರೆ ನಮ್ಮ ಗ್ರಾಮದಲ್ಲಿಯೇ ವಿದ್ಯುತ್ ಸಮಸ್ಯೆ ತಾಂಡವಾಡುತ್ತಿದೆ ಇದರಿಂದ ವಿದ್ಯಾರ್ಥಿಗಳಿಗೆ, ರೈತರಿಗೆ, ಗೃಹಣಿಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಿರಂತರ ವಿದ್ಯುತ್ ಯೋಜನೆ ಯಡಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ವಿದ್ಯುತ್ ಸಮಸ್ಯೆಯ ಬಗ್ಗೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಜಯ ವಿಭವ ಸ್ವಾಮಿ ರವರಿಗೆ ದೂರವಾಣಿ ಮುಖಾಂತರ ತಿಳಿಸಲಾಗಿತ್ತು. ತಕ್ಷಣ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸೆಸ್ಕ್ ವ್ಯವಸ್ಥಾಪಕರು ಕೊಳ್ಳೇಗಾಲ ಉಪ ವಿಭಾಗದ ಪ್ರಭಾರ ಇಇ ವಸಂತ್ ಕುಮಾರ್ ರವರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಇ ವಸಂತ್ ಕುಮಾರ್ ರವರು ಹನೂರು ವಿಭಾಗದ ಎಇಇಶಂಕರ್ ರವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ತಕ್ಷಣ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸುವಂತೆ ಸೂಚಿಸಿ ಕಾಮಗಾರಿ ಪ್ರಾರಂಭಿಸಿದ್ದರು. ಎಚ್ಚೆತ್ತ ಶಂಕರ್ ರವರು ನಿರಂತರ ವಿದ್ಯುತ್ ಯೋಜನೆಯಡಿ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಂಡಿದ್ದಾರೆ.
NJY ಬೇರ್ಪಡಿಸಿ ಸರಿಯಾದ ಮಾರ್ಗ ರೂಪಿಸಲು ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ ಆದರೆ ತುರ್ತು ಅವಶ್ಯಕತೆ ಹಾಗೂ ಗ್ರಾಮಸ್ಥರ ಮನವಿ ಪರಿಗಣಿಸಿ ತಾತ್ಕಾಲಿಕವಾಗಿ 24*7 ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ನೀಡಲು ಸೋಮವಾರದಿಂದಲೇ ಕ್ರಮ ವಹಿಸಲಾಗಿದೆ ಮಂಗಳವಾರ ಸಂಜೆ ಒಳಗೆ ಕಾಮಗಾರಿ ಮುಕ್ತಾಯಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವ ಸ್ವಾಮಿ ಆಂದೋಲನ ಟಿವಿಗೆ ಮಾಹಿತಿ ನೀಡಿದ್ದಾರೆ.
ಆದೋಲನ ಟಿವಿ ವರದಿ ಫಲಶೃತಿ
ಮಹಾದೇಶ್ ಎಂ ಗೌಡ .ಹನೂರು ತಾ. ವರದಿಗಾರರು