ಮೈಸೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಾಧ್ಯಮದವರೊಟ್ಟಿಗೆ ಮಾತನಾಡಿ ನನ್ನ ಆಡಳಿತ ಕಾಲದಲ್ಲಿ ಕೆಲವೊಂದು ಇಲಾಖೆಯಲ್ಲಿ ಪರ್ಸೆಂಟೇಜ್ ಪಡೆದಿದ್ದಾರೆ ಅದು ನನಗೆ ಗೊತ್ತು. ನನ್ನ ಪಕ್ಷ ಕೈಯಲ್ಲಿದ್ದ ಇಲಾಖೆಗಳಲ್ಲಿ ಅದು ಆಗಲಿಲ್ಲ ನಾನು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಕಾಂಗ್ರೆಸ್ ನಾಯಕರು ಇದು ನನ್ನ ಇಲಾಖೆ ನನ್ನ ಮೇಲೆ ಹಿಡಿತ ಮಾಡಬಾರದು ಎಂದು ಪದೇ ಪದೇ ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಪರ್ಸೆಂಟೇಜ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಸರ್ಕಾರದ ನಡವಳಿಕೆ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯವಿದೆ. ಪರ್ಸೆಂಟೇಜ್ ವ್ಯವಸ್ಥೆ ಸ್ವಾತಂತ್ರ್ಯ ಪೂರ್ವದಲ್ಲಿ ಇತ್ತು. ಬ್ರಿಟಿಷರ ಕಾಲದಲ್ಲೂ ಇತ್ತು ಇದನ್ನು ಪುಸ್ತಕಗಳಲ್ಲಿ ಓದಿದ್ದೇನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವರೆಗೂ ಸಣ್ಣ ಮಟ್ಟದಲ್ಲಿ ಎಲ್ಲಾ ಕಾಲದಲ್ಲೂ ಇದೆ. ಅಬಕಾರಿ ಲಾಬಿ,ಶಿಕ್ಷಣ ಲಾಬಿ ಗುತ್ತಿಗೆದಾರರೂ ಮೊದಲಿನಿಂದಲೂ 2-3 ಪರ್ಸೆಂಟೇಜ್ ಫಿಕ್ಸ್ ಆಗದೆ ಈಗ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ
ಆ ಸರ್ಕಾರ,ಈ ಸರ್ಕಾರ ಅಂತಲೂ ಲಿಮಿಟೆಡ್ ಅಗಿದ್ದ ಪರ್ಸೆಂಟೇಜ್ ವ್ಯವಹಾರ 2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಹೆಚ್ಚಾಯ್ತು. ನಾನು ಸಿಎಂ ಆಗಿದ್ದಾಗ ಪರ್ಸೆಂಟೇಜ್ ಕೇಳಲಿಲ್ಲ ಬಿಜೆಪಿ ಸರ್ಕಾರ ಬಂದ ಮೇಲೆ ಶಾಸಕರ ಮಟ್ಟದಲ್ಲಿ ಪರ್ಸೆಂಟೇಜ್ ಶುರುವಾಗಿದೆ. ಶಾಸಕರುಗಳೇ ಬೆಟ್ಟಗುಡ್ಡ ಲೀಜ್ ಹಾಕಿಕೊಂಡು ಕ್ರಶರ್ ಶುರುಮಾಡಿದ್ದಾರೆ. ಇದೆಲ್ಲ ಆರಂಭವಾಗಿತ್ತು ಬಿಜೆಪಿ ಸರ್ಕಾರದಲ್ಲೆ
ಲಾಟರಿ ನಿಷೇಧ ಮಾಡುವಾಗ ನನ್ನ ಮೇಲೆ ಒತ್ತಡ ತಂದರು. ಆಫ್ಹರ್ ಮೇಲೆ ಆಫ್ಹರ್ ಇಟ್ಟಿದ್ದರು. ಆಫ್ಹರ್ ಕೊಟ್ಟವರು ಇನ್ನೂ ಬದುಕಿದ್ದಾರೆ. ಹೈಕಮಾಂಡ್ ಗೆ ಹಣ ಕಳಿಸುವ ಪ್ರಕ್ರಿಯೆ ಎರಡು ಪಕ್ಷದಲ್ಲಿದೆ. ನಾವು ಆಡಳಿತದಲ್ಲಿದ್ದಾಗ
ಯಾವ ಅಧಿಕಾರಿಗಳ ಬಳಿಯೂ ಹಣ ಕೇಳಿಲ್ಲ. ಚಂದ ಎತ್ತಿಸಿಲ್ಲ. ಹೀಗಾಗಿ, ಸರಕಾರದ ಕಡತಗಳು ನಮಗೆ ಬೇಗ ಸಿಗುತ್ತವೆ.ಯಾರು ಇಲ್ಲಿ ನೆಟ್ಟಗಿದ್ದರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.