ಮೈಸೂರು: ಕೆಪಿಸಿಸಿ ಮಾಜಿ ಅಧ್ಯಕ್ಷ ,ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿ ಬಳಗದಿಂದ ಆಚರಿಸಲಾಯಿತು.
ನಗರದ ಅರಮನೆ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗ ಪೂಜೆ ಸಲ್ಲಿಸಿದ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.
ಮುಖಂಡರಾದ ಮಹೇಶ್ ಮಂಜುನಾಥ್ ಕಾಂತಾರಾಜು ತಿಮ್ಮಯ್ಯ ಸೋಮಶೇಖರ್ ಶಿವಕುಮಾರ್ ಸಿದ್ದಲಿಂಗಪ್ಪ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಎ.ವೆಂಕಟೇಶ್ , ಪ್ರತಿ ವರ್ಷದಂತೆ ಈ ಬಾರಿಯೂ ಹುಟ್ಟು ಹಬ್ಬ ಆಚರಿಸಿ ಸಿಹಿ ವಿತರಣೆ ಮಾಡಲಾಗಿದೆ.ಡಾ.ಜಿ.ಪರಮೇಶ್ವರ್ ಅವರಿಗೆ ಆರೋಗ್ಯ ಐಶ್ವರ್ಯ ರಾಜಕೀಯ ಸ್ಥಾನಮಾನ ನೀಡಲೆಂದು ಕೋರುತ್ತೇನೆ.ಯಾರನ್ನು ದ್ವೇಷಿಸದೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಮನಸ್ಸು. ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ ನಾಯಕ.ಮುಂದಿನಚುನಾವಣೆಯಲ್ಲಿ ಪ್ರಣಾಳಿಕೆ ಸಿದ್ದ ಪಡಿಸಲು ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಸರ್ವಜನಾಂಗದ ವಿಶ್ವಾಸ ಪಡೆದು ಪ್ರಣಾಳಿಕೆ ತಯಾರು ಮಾಡಲಿದ್ದಾರೆ. ಜನರು ಶಾಂತಿಯಾಗಿ ಬದುಕಲು ಬಿಜೆಪಿ ಸರ್ಕಾರ ಬಿಡುತ್ತಿಲ್ಲ.ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬದೆ ಕಾಲಾಹರಣ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಬಡವರ ಪಕ್ಷ.ಬಡವರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.