ಪಾಂಡವಪುರ: ಕಾಲೇಜಿಗೆ ಹೋದ ಬಾಲಕಿ ಕಾಣೆಯಾಗಿರುವ ಘಟನೆ ನ.೨೪ರಂದು ನಡೆದಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕಿನ ತಿರುಮಲಾಪುರ ಗ್ರಾಮದ ಸತೀಶ್ ಎಂಬವರ ಪುತ್ರಿ ನಂದಿನಿ (೧೭) ಕಾಣೆಯಾದ ಬಾಲಕಿ. ಪಾಂಡವಪುರದಲ್ಲಿ ಪಿಯುಸಿ ಓದುತ್ತಿದ್ದ ಬಾಲಕಿ ನಂದಿನಿ ನ.೨೪ರಂದು ಬೆಳಿಗ್ಗೆ ಕಾಲೇಜಿಗೆ ಹೋದವಳು ಸಂಜೆಯಾದರು ಮನೆಗೆ ಬಾರದ ಹಿನ್ನೆಲೆಯಲ್ಲಿ ಕಾಲೇಜಿನ ಬಳಿ ವಿಚಾರ ಮಾಡಿದ ಸಂದರ್ಭದಲ್ಲಿ ನಂದಿನಿಯನ್ನು ಸಿದ್ದ ಎಂಬ ಯುವಕ ಬೈಕ್‌ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದ್ದಾನೆ ಎಂಬುದಾಗಿ ತಿಳಿಸಿದ್ದಾರೆ.
ಹಾಗಾಗಿ ನನ್ನ ಮಗಳನ್ನು ಹುಡುಕಿಕೊಡಬೇಕು ಎಂದು ಬಾಲಕಿ ತಂದೆ ಸತೀಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಯಿಂದ ಹೋಗುವಾಗ ರೆಡ್‌ಮಿ ಮೊಬೈಲ್, ಮೈಮೇಲೆ ನೀಲಿ ಕಲರ್ ಟಾಪ್, ಬ್ಲಾಕ್ ಪ್ಯಾಂಟ್ ಧರಿಸಿದ್ದಳು. ೫.೫ ಅಡಿ ಎತ್ತರ, ಗೋಧಿ ಬಣ್ಣ ಹೊಂದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.



