Mysore
21
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಸ್ವಂತ ದುಡ್ಡಲ್ಲಿ ಶಾಲೆ ಕಟ್ಟಿ, ಕೇಸರಿ ಬಣ್ಣ ಹಾಕ್ಕೊಳಿ, ಸರ್ಕಾರದ ದುಡ್ಡಲ್ಲಲ್ಲ: ಶಾಸಕ ಆರ್.ನರೇಂದ್ರ

ಹನೂರು : ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಹಾಕುವುದನ್ನು ಶಾಸಕ ಆರ್.ನರೇಂದ್ರ ವಿರೋಧಿಸಿದ್ದು ಸರ್ಕಾರದ ಹಣದಲ್ಲಿ ಬಿಜೆಪಿ ಚಿಹ್ನೆಯಂತಿರುವ ಕೇಸರಿ ಬಣ್ಣ ಹಾಕುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಜಿ. ವಿ.ಗೌಡ ಪದವಿಪೂರ್ವ ಕಾಲೇಜು ಆವರಣದಲ್ಲಿ ನೂತನ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಯಾವುದೇ ಒಂದು ಪಕ್ಷ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಚಿನ್ಹೆ ಬಳಸಬೇಕು. ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಕಾಂಗ್ರೆಸ್ ಚಿಹ್ನೆ ಜಾ.ದಳ ಅಧಿಕಾರಕ್ಕೆ ಬಂದರೆ ಅದರ ಚಿಹ್ನೆ ಬಿಜೆಪಿ ಬಂದರೆ ಕಮಲದ ಚಿಹ್ನೆ ಬಣ್ಣ ಬಳಿಸುವುದು ತಪ್ಪು ಎಂದರು.

ಸರ್ಕಾರ ನಡೆಸುವುದು ಜನರ ಆದಾಯದಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಶಾಲೆಗೆ ಚೆನ್ನಾಗಿ ಕಾಣಲು ಯಾವ ಬಣ್ಣ ಬಳಸಬೇಕು ಅದನ್ನು ಬಳಸಬೇಕು. ಇದುವರೆಗೂ ಯಾವುದೇ ಒಂದು ಸರ್ಕಾರ ತಮ್ಮ ಪಕ್ಷಗಳ ಚಿಹ್ನೆಯ ಬಣ್ಣವನ್ನು ಬಳಿಸಿಲ್ಲ. ಈಗಿನ ಬಿಜೆಪಿ ಸರ್ಕಾರ ಕಮಲದ ಚಿಹ್ನೆ ಕೇಸರಿ ಎಂದು ಬಣ್ಣ ಬಳಿಯುವ ಯೋಚನೆ ಮಾಡಿರುವುದು ತಪ್ಪು. ಬಿಜೆಪಿಯವರು ಬೇಕಿದ್ದರೆ ತಮ್ಮ ಸ್ವಂತ ಹಣದಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಿ ಯಾವ ಬಣ್ಣ ಬೇಕಾದರು ಬಳಸಿಕೊಳ್ಳಲಿ ಇದನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣ ಬಳೆಯುವುದಕ್ಕೆ ನನ್ನ ಆಕ್ಷೇಪವಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!