Mysore
23
broken clouds

Social Media

ಶನಿವಾರ, 16 ಮೇ 2026
Light
Dark

ವಂದೇ ಮಾತರಂ ಹಾಡಿನ ಮೂಲಕ ಯೋಗಾಸನಗಳ ಪ್ರದರ್ಶನದೊಂದಿಗೆ ಯೋಗ ದಸರಾಗೆ ಚಾಲನೆ

ಮೈಸೂರು : ವಿಶ್ವವಿಖ್ಯಾ ಮೈಸೂರು ದಸರಾ 2022ರ ಅಂಗವಾಗಿ ಇಂದು ನಗರದ ಓವೆಲ್ ಮೈದಾನದ ಆವರಣದಲ್ಲಿ ಮಾ ತುಜೇ ಸಲಾಮ್…, ವಂದೇ ಮಾತರಂ.., ಎಂಬ ಹಾಡಿಗೆ ವಿವಿಧ ಯೋಗಾಸನಗಳ ಪ್ರದರ್ಶನದೊಂದಿಗೆ ನೃತ್ಯ ರೂಪಕದ ಮೂಲಕ ಯೋಗ ದಸರಾಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಅನೇಕ ಸಮಸ್ಯಗಳಿಗೆ ಯೋಗ ಉತ್ತಮ ಪರಿಹಾರ. ನಿಯಮಿತವಾಗಿ ಯೋಗವನ್ನು ಮಾಡುವ ಮೂಲಕ ಜನರು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದರು. ಈ ಹಿಂದೆ ರಾಜರುಗಳು  ಬೇರೆ ಬೇರೆ ರಾಜ್ಯಗಳಿಂದ ಯೋಗ ಗುರುಗಳನ್ನು ಕರೆಯಿಸಿ ಮೈಸೂರಿಗರಿಗೆ ಯೋಗದ ತರಬೇತಿ ಕೊಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಗ ದಸರಾ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಡಾ.ಚಂದ್ರಶೇಖರ್, ಶ್ರೀಹರಿ, ಡಾ.ಒಉಷ್ಪ, ಡಾ.ಕುಸುಮ, ಗಜಾನನ ಹೆಗಡೆ, ಡಾ.ಮಹೇಶ್, ದೇವರಾಜ್ ಮುಂತಾದವರು ಹಾಜರಿದ್ದರು. ವಿವಿಧ ೧೦ ಸಂಸ್ಥೆಗಳ ವಿದ್ಯಾರ್ಥಿಗಳು ನೃತ್ಯ ರೂಪಕ ನಡೆಸಿಕೊಟ್ಟರು. ಸಾಧಕರನ್ನು ಸನ್ಮಾನಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!