ಮೈಸೂರು : ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರ 90ನೇ ವರ್ಷದ ಜನ್ಮದಿನದ ಪ್ರಯುಕ್ತ ಅ.17 ರಂದು ಸಂಜೆ 6.15 ಕ್ಕೆ ನಗರ ಸರಸ್ವತಿಪುರಂನಲ್ಲಿರುವ ಜೆ ಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಹುಟ್ಡುಹಬ್ಬದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಅವರ ಕುರಿತಾದ ಗಣೇಶ್ ಅಮೀನ್‌ಗಡ ಹಾಗೂ ರಘುಪತಿ ತಮಣ್ ಕರ್ ಅವರ ಸಂಪಾದಕತ್ವದಲ್ಲಿ ರಚನೆಯಾದ ʼಸರೋದ್ ಸ್ವರಯಾನʼ ದ 2ನೇ ಮುದ್ರಣವನ್ನು ಬಿಡುಗಡೆಗೊಳಿಸಲಾಗುವುದು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕವಿ, ಕಾದಂಬರಿಕಾರ ಚಂದ್ರಶೇಖರ ಕಂಬಾರರವರು, ಉಸ್ತಾದ್ ಫೈಯಾಜ್ ಖಾನ್, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮನು ಬಳಿಗಾರ್ ಭಾಗಿಯಾಗಲಿದ್ದಾರೆ.
ಅಂದು ಪಂಡಿತ್ ರಾಜೀವ್ ತಾರಾನಾಥ್ ʼಎ ಲೈಫ್ ಇನ್ ಮ್ಯೂಸಿಕ್ʼ ಸಾಕ್ಷ್ಯಚಿತ್ರ ಹಾಗೂ ವಿಡಿಯೋ ತುಣುಕುಗಳ ಪ್ರದರ್ಶನವಿರುತ್ತದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಬೇಕೆಂದು ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.





