Mysore
27
broken clouds

Social Media

ಬುಧವಾರ, 09 ಜುಲೈ 2025
Light
Dark

ಮೈಸೂರಿನಲ್ಲಿ ಎನ್‌ಐಎ ತನಿಖೆ ಚುರುಕು

ಮೈಸೂರು: ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಐವರು ಸದಸ್ಯರ ತಂಡ ಮಂಗಳೂರು ಬಾಂಬ್ ಸ್ಛೋಟ ಪ್ರಕರಣದ ತನಿಖೆುಂನ್ನು ತೀವ್ರಗೊಳಿಸಿದೆ.

ಪ್ರಮುಖ ಶಂಕಿತ ಆರೋಪಿ ಎಚ್ ಮೊಹಮ್ಮದ್ ಶಾರಿಖ್ (೨೪) ನಗರದಲ್ಲಿ ಬಾಡಿಗೆ ಮನೆುಂಲ್ಲಿ ವಾಸವಿದ್ದುದು ಬೆಳಕಿಗೆ ಬಂದ ನಂತರ ಎಲ್ಲರ ಗಮನ ಮೈಸೂರಿನತ್ತ ತಿರುಗಿದೆ. ಬಿಕಾಂ ಪದವೀಧರನಾದ ಶಾರಿಖ್ ಮೈಸೂರಿನಲ್ಲಿ ಮೊಬೈಲ್ ಫೋನ್ ರಿಪೇರಿ ತರಬೇತಿ ಪಡೆದಿರುವ ಶಂಕೆ ವ್ಯಕ್ತವಾಗಿದೆ.

ಎನ್‌ಐಎ ತಂಡ ಶಾರಿಖ್ ಮೈಸೂರಿಗೆ ಭೇಟಿ ನೀಡಿದ ಸಂಗತಿಗಳು, ಸಂಪರ್ಕಗಳು ಮತ್ತು ಸ್ಥಳಗಳ ತನಿಖೆುಂನ್ನು ಎನ್‌ಐಎ ತಂಡ ನಡೆಸುತ್ತಿದೆ.
ಭಾನುವಾರವೇ ನಗರಕ್ಕೆ ಆಗಮಿಸಿರುವ ಎನ್‌ಐಎ ತಂಡ ನಕಲಿ ದಾಖಲೆಗಳನ್ನು ಬಳಸಿ ಬಾಡಿಗೆಗೆ ಪಡೆದಿದ್ದ ಲೋಕನಾಯಕನಗರದಲ್ಲಿ ಶಾರಿಖ್ ವಾಸವಿದ್ದ ಮನೆಗೆ ಭೇಟಿ ನೀಡಿತ್ತು. ಆತನ ಕೊಠಡಿಯಲ್ಲಿ ಪತ್ತೆಾಂದ ಸ್ಛೋಟಕ ವಸ್ತುಗಳ ಬಗ್ಗೆಯೂ ಎನ್‌ಐಎ ಮಾಹಿತಿ ಪಡೆದುಕೊಂಡಿದೆ.

ಈಮಧ್ಯೆ, ಮೈಸೂರು ಪೊಲೀಸರು ಮೊಬೈಲ್ ಫೋನ್‌ಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಹೇಳಲಾದ ಶಾರಿಖ್‌ನ ಸ್ನೇಹಿತನ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಸಿಸಿಬಿ ಅಧಿಕಾರಿಗಳು, ವಿಶೇಷ ದಳ ಸೇರಿದಂತೆ ಗುಪ್ತಚರ ದಳ ಹೊಸ ಬಾಡಿಗೆದಾರರ ಮಾಹಿತಿ ಕಲೆಹಾಕುತ್ತಿದೆ ಮತ್ತು ಕಟ್ಟುನಿಟ್ಟಿನ ನಿಗಾ ಇರಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!