ಮೈಸೂರು : ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆ.6 ರಿಂದ 9 ರವರೆಗೆ ನಡೆದ 21ನೇ ರಾಜ್ಯಮಟ್ಟದ ವುಶು ಸಬ್ ಜೂನಿಯರ್ ವಿಭಾಗದಲ್ಲಿ ಮೈಸೂರಿನ ಪ್ರಣತಿ ಜಿ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
2ನೇ ತರಗತಿ ಓದುತ್ತಿರುವ ಪ್ರಣತಿಗೆ ಇದು ಸತತ ಮೂರನೇ ಚಿನ್ನದ ಪದಕವಾಗಿದೆ. ಪ್ರಣತಿಯ ಈ ಸಾಧನೆ ಮೈಸೂರಿಗರಿಗೆ ಹೆಮ್ಮೆ ತಂದಿದೆ. ಈ ಹಿದೆಯೂ ಕೂಡ ರಾಜ್ಯ ಮಟ್ಟದಲ್ಲಿ 2 ಗೋಲ್ಡ್ ಮೆಡೆಲ್ ಪಡೆದುಕೊಂಡಿದ್ದಾಳೆ. ರಾಷ್ಟ್ರಮಟ್ಟದಲ್ಲಿ ೨ ಬ್ರೌನ್ಸ್ ತನ್ನದಾಗಿಸಿಕೊಂಡಿದ್ದಾಳೆ . 2 ವರ್ಷಗಳಲ್ಲಿ 10 ರಿಂದ 12 ವುಶು ಸ್ಪರ್ಧೆಯಲ್ಲಿ ಭಾಗಿ.ನಾನು ಬೇರೆಯವರಿಗೆ ಸ್ಪೂರ್ತಿಯಾಗಬೇಕು ಎನ್ನುತ್ತಾಳೆ ಪ್ರಣತಿ.