ಮೈಸೂರು : ನಗರದ ಜೆಎಸ್ ಎಸ್ ಆಸ್ಪತ್ರೆಯಲ್ಲಿ ಪ್ರಸೂತಿ ಮತಯ್ತು ಸ್ತ್ರೀ ರೋಗ ವಿಭಾಗದೆ ವತಿಯಿಂದ ಪ್ರಸವಾನಂತರದ ರಕ್ತಸ್ರಾವ ( NDVH+PPH) ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ನಡೆಸಲಾಗಿತು.

ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ ಹಾಗೂ ಮೈಸೂರು ಮತ್ತು ಸ್ರ್ತೀ ರೋಗ ಸಮಾಜದ ಸಹಯೋಗದೊಂದಿಗೆ ಪ್ರಸವಾನಂತರದ ರಕ್ತಸ್ರಾವ ( NDVH+PPH) ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆರಿಗೆಯ ನಂತರ ಗರ್ಭಿಣಿಯರ ಜೀವಕ್ಕೆ ಅಪಾಯಕಾರಿಯಾಗುವ ಅಂಶಗಳು ಮತ್ತು ತೊಂದರೆಗಳು ಹಾಗೂ ಪ್ರಸವಾನಂತರದ ರಕ್ತಸ್ರಾವವನ್ನು ನಿರ್ವಹಿಸುವ ತಂತ್ರಗಳನ್ನು ಸುಧಾರಿಸುವ ಕುರಿತು ತರಬೇತಿಯನ್ನು ನೀಡಲಾಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಆಶಿಶ್‌ಕುಬ್ಡೆ, ಪ್ರಖ್ಯಾತ ಸ್ತ್ರೀ ರೋಗ ತಜ್ಞರು ಹಾಗೂ ಲ್ಯಾಪ್ರೋಸ್ಕೋಪಿಕ್ / ಮಲ್ಟೀ ಸರ್ಜನ್ ಪೆಲ್ಟಿಕ್ ಸರ್ಜನ್, ಸೆವೆನ್ ಸ್ಟಾರ್ ಆಸ್ಪತ್ರೆ, ನಾಗ್ಪುರ ಮತ್ತು ಡಾ.ವೀರೇಂದ್ರಕುಮಾರ್, ಘಟಕದ ಮುಖ್ಯಸ್ಥರು ಸೇರಿದಂತೆ ಡಾ.ಜಯಪ್ರಕಾಶ್ ಪಾಟೀಲ್, ಲ್ಯಾಪ್ರೋಸ್ಕೋಪಿಕ್ ಮತ್ತು ಪೆಲ್ಟಿಕ್ ಸರ್ಜನ್, ಬೆಟ್ಟದೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರು ಇವರುಗಳು ಕಾರ್ಯಾಗಾರದಲ್ಲಿ ವಿವಿಧ ಅಂಶಗಳ ಕುರಿತು ಕಾರ್ಯಾಗಾರದಲ್ಲಿ ನೆರೆದಿದ್ದವರಿಗೆ ತರಬೇತಿ ನೀಡಿದರು.
ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಅಧೀಕ್ಷಕರಾದ ಡಾ.ಸಿ.ಪಿ. ಮಧು, ವಿಶೇಷ ಆಹ್ವಾನಿತರಾಗಿ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಸುಮಾ, ಉಪನಿರ್ದೇಶಕರಾದ ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಾಗಾರಕ್ಕೆ ಮೈಸೂರು, ಮಂಡ್ಯ, ಮಡಿಕೇರಿ, ಕೊಳ್ಳೆಗಾಲ ಸೇರಿದಂತೆ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಸ್ತ್ರೀರೋಗ ತಜ್ಞರನ್ನು ಒಳಗೊಂಡ ಸುಮಾರು 125 ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.