ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಶುಲ್ಕ ದರವನ್ನು ಹೆಚ್ಚಳ ಮಾಡಲಾಗಿದ್ದು, ಆಗಸ್ಟ್ 1 ರಿಂದ ಹೊಸ ದರ ಜಾರಿಯಾಗಲಿದೆ.
ಪ್ರಾಣಿಗಳ ನಿರ್ವಹಣಾ ವೆಚ್ಚವು ಹೆಚ್ಚಾಗಿದ್ದು, ಮೃಗಾಲಯ, ಕಾರಂಜಿಕೆರೆಯ ಪ್ರವೇಶ ದರಗಳನ್ನು ಪರಿಷ್ಕರಣೆ ಮಾಡುವಂತೆ ಪ್ರಸ್ತಾಪಿಸಿ, ಶೇ.20ರಷ್ಟು ಹೆಚ್ಚಳ ಮಾಡಿ ದರಗಳನ್ನು ಹೆಚ್ಚಿಸಲು ಅನುಮೋದನೆ ನೀಡುವಂತೆ ಕೋರಲಾಗಿತ್ತು. ಅದರಂತೆ, ಜುಲೈ 10 ಮತ್ತು 24 ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಽಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿದ ಬಳಿಕ ದರ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಲಾಗಿದೆ.
ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಶೇ.20ರಷ್ಟು ದರ ಪರಿಷ್ಕರಣೆ ಮಾಡಲು ಒಪ್ಪಿಗೆ ಸೂಚಿಸಿದ್ದರಿಂದ ಚಿಲ್ಲರೆ ಅಭಾವವನ್ನು ಸರಿದೂಗಿಸಲು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಣ್ಣಪುಟ್ಟ ದರದ ವ್ಯತ್ಯಾಸವನ್ನು ಕೈಬಿಟ್ಟು ದರ ಪರಿಷ್ಕರಿಸಲಾಗಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ರಂಗಸ್ವಾಮಿ ಹೇಳಿದ್ದಾರೆ.
ಹೊಸ ದರ ಪಟ್ಟಿ ಹೀಗಿದೆ…
ಮೃಗಾಲಯ
ವಯಸ್ಕರಿಗೆ – 120 ರೂ.
ಮಕ್ಕಳಿಗೆ (5-12ವರ್ಷ) -60 ರೂ.
ಕಾರಂಜಿಕೆರೆ
ವಯಸ್ಕರಿಗೆ -60ರೂ
ಮಕ್ಕಳಿಗೆ (5-12ವರ್ಷ) -30 ರೂ.
ಮೃಗಾಲಯ-ಕಾರಂಜಿ ಕಾಂಬೋ
ವಯಸ್ಕರಿಗೆ- 150 ರೂ.
ಮಕ್ಕಳಿಗೆ-80 ರೂ.
ವಿದ್ಯಾರ್ಥಿಗಳಿಗೆ ರಿಯಾಯಿತಿ
ಎಲ್‌ಕೆಜೆಯಿಂದ ಯುಕೆಜಿ ವಿದ್ಯಾರ್ಥಿಗಳಿಗೆ-ಉಚಿತ
1-7ನೇ ತರಗತಿ -40 ರೂ.
8-12ನೇ ತರಗತಿ – 50 ರೂ.
ಬ್ಯಾಟರಿ ಚಾಲಿತ ವಾಹನದ ಟಿಕೆಟ್
ವಯಸ್ಕರಿಗೆ-240 ರೂ.
ಮಕ್ಕಳಿಗೆ (5-12ವರ್ಷ) ಹಿರಿಯ ನಾಗರಿಕರಿಗೆ-180 ರೂ.





