Mysore
25
scattered clouds
Light
Dark

ಕ್ಲಾಸಿ ಮಾಡೆಲ್‌ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆದ ಮೈಸೂರಿಗ ಯೋಗ ಗೌಡ

ಮೈಸೂರು: ಅಂತರಾಷ್ಟ್ರೀಯ ಕ್ಲಾಸಿ ಮಾಡೆಲ್‌ ಸ್ಪರ್ಧೆಯಲ್ಲಿ ಮೈಸೂರಿಗ ಎನ್‌.ಎಸ್‌ ಯೋಗ ಗೌಡ ಅವರು ರನ್ನರ್‌ಅಪ್‌ ಆಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇದೇ ಮೇ. 23ರಂದು ಇಂಡೋನೇಷಿಯಾದ ಬಾಲಿಯಲ್ಲಿ ನಡೆದ ಅಂತರಾಷ್ಟ್ರೀಯ ಕ್ಲಾಸಿ ಮಾಡೆಲ್‌ 2024 ಮಿಸ್ಟರ್‌ ಕ್ಯಾಟಗರಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ.

ಮೂಲತಃ ಮೈಸೂರಿನವರಾದ ಇವರು, ವಕೀಲ ಡಿ.ಎಸ್‌ ಶಿವಪ್ರಕಾಶ್‌ ಹಾಗೂ ಎಚ್‌.ಕೆ ಲತಾ ದಂಪತಿಯ ಪುತ್ರರಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ಕುಲಸೇಖರ ಅವರು ಕ್ಲಾಸಿ ಮಾಡೆಲ್‌ ಇಂಟರ್‌ ನ್ಯಾಷನಲ್‌ 2024 ಮಿಸ್ಟರ್‌ ಕ್ಯಾಟಗರಿಯಲ್ಲಿ ವಿಜೇತರಾಗಿ ಹೊರ ಹೊಮ್ಮಿದ್ದಾರೆ.