Mysore
22
overcast clouds
Light
Dark

Loksahba Election Results 2024: ಮೈಸೂರು-ಕೊಡಗು ಕ್ಷೇತ್ರದಲ್ಲಿ ಯದುವೀರ್‌-ಲಕ್ಷ್ಮಣ್‌ ವಿಧಾನಸಭಾ ಕ್ಷೇತ್ರವಾರು ಪಡೆದ ಮತ ವಿವರ

ಮೈಸೂರು: ಜೂನ್‌.4 ರಂದು ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆ ಅಂತ್ಯವಾಗಿದೆ. ಆಡಳೀತಾರೂಢ ಬಿಜೆಪಿ ಪಕ್ಷ ಈ ಬಾರಿಯೂ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲದೇ ಇದ್ದರೂ ಸಹಾ ಅಧಿಕಾರ ರಚಿಸಲು ಅಗತ್ಯವಿರುವ ಸ್ಥಾನಗಳನ್ನು ಗೆದ್ದಿದೆ.

ಇದೇ ಬಿಜೆಪಿ ಪಕ್ಷದ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ವಿರುದ್ಧ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಕ್ಷೇತ್ರದಲ್ಲಿ ರಾಜಮನೆತನದ ದೊರೆಗೆ ಜನರ ಆಶೀರ್ವಾದದಿಂದ ಲೋಕಸಭೆಗೆ ಟಿಕೆಟ್‌ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಕೆಲಸ ಮಾಡಿದ್ದ ಲಕ್ಷ್ಮಣ್‌ ಕೈ ಹಿಡಿಯುವಲ್ಲಿ ಈ ಬಾರಿಯೂ ಮತದಾರ ಹಿಂದೇಟಾಕಿದ್ದು, ಅವರಿಗೆ ಇದು ನಾಲ್ಕನೇ ಸೋಲಾಗಿದೆ.

ಇನ್ನು ಈ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಪ್ರಮಾಣ ಪತ್ರ ನೀಡಿದರು.

ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಮೈಸೂರು ಜಿ.ಪಂ.ಸಿಇಒ ಹಾಗೂ ಚುನಾವಣಾ ವೀಕ್ಷಕರು ಇದ್ದರು.

ಜತೆಗೆ ಯದುವೀರ್‌ ಹಾಗೂ ಲಕ್ಷ್ಮಣ್‌ ಅವರು ವಿಧಾನಸಭಾ ಕ್ಷೇತ್ರವಾರು ಪಡೆದ ಮತಗಳ ವಿವರ ಇಲ್ಲಿದೆ ನೋಡಿ.