ಮೈಸೂರು: ಪ್ರವಾಸೋದ್ಯಮ ಇಲಾಖೆಯ ವತಿಯಿಂದ TOURISM AND PEACE- ಪ್ರವಾಸೋದ್ಯಮ ಮತ್ತು ಶಾಂತಿ ”ಘೋಷವಾಕ್ಯದಡಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಮೈಸೂರು ಅರಮನೆ ಆವರಣದಲ್ಲಿ ಸೆಪ್ಟೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘನ ಉಪಸ್ಥಿತಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು,ಗಣ್ಯ ವ್ಯಕ್ತಿಗಳು, ಮೈಸೂರಿನ ಸಂಘ ಸಂಸ್ಥೆಗಳು, ಸರ್ವ ಧರ್ಮಗಳ ಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಕಲಾ ತಂಡಗಳು ಸೇರಿದಂತೆ ಸುಮಾರು 1000 ಜನ ಭಾಗವಹಿಸುತ್ತಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಯ ನಂತರ ಅರಮನೆಯ ಆವರಣದಿಂದ ಕೋಟೆ ಆಂಜನೇಯ ಸ್ವಾಮಿ ಉತ್ತರ ದ್ವಾರ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೇ ವೃತ್ತಕ್ಕೆ ಬಂದು ಮೆರವಣಿಗೆಯು ಅಂತ್ಯಗೊಳ್ಳುವಂತೆ ಹಮ್ಮಿಕೊಳ್ಳಲಾಗಿರುತ್ತದೆ.