Mysore
20
few clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಆನ್‌ಲೈನ್‌ ಧೋಖಾದಿಂದ 1.90 ಲಕ್ಷ ಹಣ ಕಳೆದುಕೊಂಡ ಮಹಿಳೆ

ಮೈಸೂರು: ಕೆವೈಸಿ ಸಂಬಂಧ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ ಎಂಬ ಮೇಸೇಜ್‌ಗೆ ಸ್ಪಂದಿಸಿದ ಮಹಿಳೆಯೊಬ್ಬರು ಆನ್‌ಲೈನ್‌ ಮೂಲಕ ತಮ್ಮ ಖಾತೆಯಲ್ಲಿದ್ದ ಹಣ ಕಳೆದುಕೊಂಡಿದ್ದಾರೆ.

ಮಹದೇವಪುರ ನಿವಾಸಿ ಲತಾ ಎಂಬುವರೇ ಆನ್‌ಲೈನ್‌ ಮೂಲಕ ಹಣ ಕಳೆದುಕೊಂಡ ಮಹಿಳೆ. ಮೊಬೈಲ್‌ಗೆ ಅನಾಮಧೇಯ ನಂಬರ್‌ನಿಂದ ನಿಮ್ಮ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ. ಕೆವೈಸಿ ಮಾಡಿಸಿ ಎಂದು ಮೇಸೇಜ್‌ ಬಂದಿದೆ. ಮೇಸೇಜ್‌ಗೆ ಸ್ಪಂದಿಸಿದ ಲತಾ ಅವರು ಮೊಬೈಲ್‌ ಮೂಲಕ ಸಂಪರ್ಕಿಸಿದ್ದಾರೆ. ವಂಚಕ ಹೇಳಿದಂತೆ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಒಟಿಪಿ ನಂಬರ್‌ ನೀಡಿದ್ದಾರೆ. ಆವಾಗ ಕ್ಷಣಮಾತ್ರದಲ್ಲಿ ಲತಾ ಅವರ ಕೆನರಾ ಬ್ಯಾಂಕ್‌ ಖಾತೆಯಲ್ಲಿದ್ದ 1.90 ಲಕ್ಷ ಹಣ ವಂಚಕನ ಖಾತೆಗೆ ವರ್ಗಾವಣೆಯಾಗಿದೆ.

ಈ ಬಗ್ಗೆ ಲತಾ ಅವರು ದೇವರಾಜ ಉಪ-ವಿಭಾಗ ಠಾಣೆಗೆ ದೂರು ದಾಖಲಿಸಿದ್ದಾರೆ.

Tags:
error: Content is protected !!