Mysore
19
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ಶಾಂತಿಯುತ ಮತದಾನ ನಡೆಸಲು ಜಿಲ್ಲಾಡಳಿತ ಸಿದ್ಧವಾಗಿದೆ: ಡಾ.ಕೆವಿ ರಾಜೇಂದ್ರ

ಮೈಸೂರು: ನಾಳೆ (ಏ.26) ನಡೆಯಲಿರುವ ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಚುನಾವಣಾ ಮೊದಲ ಹಂತದ ಮತದಾನವನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿಯೂ ಸಿದ್ಧವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆವಿ ರಾಜೇಂದ್ರ ಅವರು ಹೇಳಿದರು.

ನಗರದಲ್ಲಿಂದು ಮಾತನಾಡಿರುವ ಅವರು, ಅಧಿಕಾರಿಗಳಿಗೆ ಅಂತಿಮ ಹಂತದ ತಾಂತ್ರಿಕ ತರಭೇತಿ ನೀಡುತ್ತಿದ್ದೇವೆ. ಎಲ್ಲರು ಮಸ್ಟರಿಂಗ್‌ ಮುಗಿಸಿ ಮತಗಟ್ಟೆಗಳ ಬಳಿ ತಲುಪಲಿದ್ದಾರೆ. ಇದರ ನಡವೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದರು.

ಸಣ್ಣಪುಟ್ಟ ಸಮಸ್ಯೆಗಳನ್ನು ಮುಂದಿಟ್ಟು ಚುನಾವಣಾ ಬಹಿಷ್ಕಾರಕ್ಕೆ ಕೆಲವರು ಮುಂದಾಗಿದ್ದಾರೆ. ಅಂತವರನ್ನು ಸ್ಥಳೀಯ ಪಿಡಿಒಗಳ ಮೂಲಕ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ನಿಮ್ಮದು ಯಾವುದೇ ಸಮಸ್ಯೆಗಳಿದ್ದರೂ ತಪ್ಪದೇ ಬಂದು ಮತದಾನ ಮಾಡಿ ಎಂದು ಮನವಿ ಮಾಡಿದರು.

ಇನ್ನು ಚುನಾವಣಾ ಸಿಬ್ಬಂದಿಗಳಿಗೆ ಪೋಸ್ಟಲ್‌ ಓಟ್‌ ನೀಡದಿರುವ ವಿಷಯಕ್ಕೆ ಸಂಬಂಧಿಸಿದಂತೆ ಈ ಬಾರಿ ಚುನಾವಣೆಯಲ್ಲಿ ಪೋಸ್ಟಲ್‌ ವೋಟ್‌ನ ಪೋಸ್ಟ್‌ ಮಾಡುವಂತಿಲ್ಲ ಎಂದು ತಿಳಿಸಿದರು.

Tags:
error: Content is protected !!