Mysore
25
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಜ. 2, 3 ರಂದು ಮೈಸೂರು ನಗರಕ್ಕೆ ನೀರು ಪೂರೈಕೆ ವ್ಯತ್ಯಯ

ಮೈಸೂರು: ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 2ನೇ ಹಾಗೂ 3ನೇ ಹಂತದ ಯಂತ್ರಾಗಾರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಮೃತ್ ಯೋಜನೆಯಡಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.2 ಮತ್ತು 3ರಂದು ನೀರು ಸರಬರಾಜು ವ್ಯತ್ಯಯವಾಗಲಿದೆ.

ವಾರ್ಡ್ ನ.1ರಿಂದ 7, ವಾರ್ಡ್ ನಂ.20, 23,28, ವಾರ್ಡ್ ನಂ.42ರಿಂದ 45, ವಾರ್ಡ್ ನಂ.47ಕ್ಕೆ ಸಂಬಂಽಸಿದಂತೆ ಹೆಬ್ಬಾಳ ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಮೇಟಗಳ್ಳಿ, ಲೋಕನಾಯಕ ನಗರ, ಬೃಂದಾವನ ಬಡಾವಣೆ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಶಾರದಾದೇವಿನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ 1,2 ಮತ್ತು 3 ನೇ ಹಂತ, ಗೋಕುಲಂ 1,2,3ನೇ ಹಂತ ಹಾಗೂ ಹೊರ ವಲಯಗಳಾದ ಆರ್‌ಎಂಪಿ, ಬಿಇಎಂಎಲ್, ಯಾದವಗಿರಿ, ಬನ್ನಿಮಂಟಪ, ಎಬಿಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶ್ರೀ ಶಿವರಾತ್ರೀಶ್ವರ ನಗರ, ತಿಲಕ್‌ನಗರ ಬಡೇಮಕಾನ್, ಹಲೀಂ ನಗರ, ದೇವರಾಜ ಮೊಹಲ್ಲಾ ಭಾಗಶಃ, ಎನ್.ಆರ್.ಮೊಹಲ್ಲಾ, ಭಾಗಶಃ, ನಜರಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ಕೃಷ್ಣಮೂರ್ತಿಪುರಂ, ಜನತಾನಗರ, ಕೆಎಚ್‌ಬಿ ಕಾಲೋನಿ, ಹೂಟಗಳ್ಳಿ ಇತ್ಯಾದಿ ಪ್ರದೇಶಗಳಿಗೆ ನೀರು ಸರಬರಾಜು ವ್ಯತ್ಯಯವಾಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!