Mysore
23
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಕೆ ಆರ್ ಎಸ್ ಜಲಾಶಯದಲ್ಲಿ 108 ಅಡಿಗೆ ಏರಿಕೆಯಾದ ನೀರಿನ ಮಟ್ಟ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಹಿನ್ನೆಲೆ ಒಂದು ವಾರದಲ್ಲಿ ಕೆಆರ್‌ಎಸ್‌ ಡ್ಯಾಂಒಂದುವಾರದ ಅವಧಿಯಲ್ಲಿ 17 ಅಡಿ ಭರ್ತಿಯಾಗಿದೆ.

ಒಂದು ವಾರದಲ್ಲಿ ಡ್ಯಾಂಗೆ 13 ಟಿಎಂಸಿಗೂ ಅಧಿಕ ಪ್ರಮಾಣದ ನೀರು ಹರಿದುಬಂದಿದೆ. ಕಳೆದ ವಾರ ಕೆಆರ್‌ಎಸ್ ನೀರಿನ ಮಟ್ಟ 91.20 ಅಡಿಗಳಷ್ಟಿತ್ತು. ಈಗ 108.18 ಅಡಿಗಳು ಭರ್ತಿಯಾಗಿದೆ. ಕಳೆದ ವಾರ ಕೆಆರ್‌ಎಸ್ ಡ್ಯಾಂ‌ನಲ್ಲಿ 16.690 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ಇಂದು ಡ್ಯಾಂನಲ್ಲಿ 29.452 ಟಿಎಂಸಿ ನೀರು ಸಂಗ್ರಹವಾಗಿದೆ.

ಸದ್ಯ ಕೆಆರ್‌ಎಸ್ ಡ್ಯಾಂ ಒಳಹರಿವು 40,341 ಕ್ಯೂಸೆಕ್‌ ಇದೆ. ಡ್ಯಾಂನ ಹೊರಹರಿವು 4,106 ಕ್ಯೂಸೆಕ್ ನಷ್ಟಿದೆ. ಇದೇ ರೀತಿಯ ಒಳಹರಿವು ಇದ್ದರೆ ಬಹುಬೇಗನೆ ಡ್ಯಾಂ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!