Mysore
20
broken clouds

Social Media

ಶುಕ್ರವಾರ, 30 ಜನವರಿ 2026
Light
Dark

ಒಕ್ಕಲಿಗರು ಉದ್ಯಮಶೀಲತೆ ರೂಢಿಸಿಕೊಳ್ಳಬೇಕು: ನಿಶ್ಚಲಾನಂದನಾಥ

Vokkaligas must embrace entrepreneurship: Nishchalanandanatha

ಪಿರಿಯಾಪಟ್ಟಣ : ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಕ್ಕೆ, ನಾಡಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಲು ಒಕ್ಕಲಿಗ ಸಮುದಾಯ ಹೆಚ್ಚು ಗಮನಹರಿಸಬೇಕೆಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಸಂಸ್ಮರಣೋತ್ಸವ ಮತ್ತು ಪ್ರಗತಿಪರ ರೈತರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಕ್ಕಲಿಗ ಸಮುದಾಯ ಕುಲಕಸುಬಿಗೆ ಆದ್ಯತೆ ನೀಡದೆ ಸಮಾಜದಲ್ಲಿ ಇರುವ ಅವಕಾಶಗಳನ್ನು ಸೃಷ್ಟಿಸಿಕೊಂಡು ಪ್ರಗತಿಯತ್ತ ಮುನ್ನುಗಬೇಕು. ಕೃಷಿಯನ್ನೇ ಹೆಚ್ಚು ಅವಲಂಬಿಸಿಕೊಳ್ಳುವುದರ ಬದಲು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು. ಪ್ರಪಂಚದ ಇನ್ನಿತರ ಕ್ಷೇತ್ರಗಳತ್ತ ತಮ್ಮ ಗಮನವನ್ನು ಹರಿಸಿ ಹೊಸ ಹೊಸ ಅಧ್ಯಯನಗಳಿಗೆ ಹೂಡಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.

ಇಂದು ನಮ್ಮ ಸಮುದಾಯದಲ್ಲಿ ಮಹಿಳೆಯರು ಕೂಡ ಜ್ಞಾನವಂತರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ಕೆಂಪೇಗೌಡರವರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ವಿಶ್ವವಿಖ್ಯಾತವಾಗಿದೆ. ಕೆಂಪೇಗೌಡರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ಜಯಂತಿ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಅವರು ಸರ್ವರ ಅನುಕೂಲಕ್ಕಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಅವಧಿಯಲ್ಲಿ ಕೃಷಿ ಕ್ಷೇತ್ರ, ವ್ಯಾಪಾರ, ಶಿಕ್ಷಣ, ಸಮುದಾಯದ ಏಳಿಗೆ ಸಾಹಿತ್ಯ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿದ್ದ ಫಲವಾಗಿ ಬೆಂಗಳೂರು ಪ್ರಸಿದ್ಧಿಯಾಗಲು ಕಾರಣವಾಗಿದೆ ಎಂದರು.

ಸ್ಮಾರ್ಟ್ ಕ್ವಿಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪು ಗೌಡ ಮಾತನಾಡಿದರು. ಈ ವೇಳೆ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ರ‍್ಯಾಂಕ್ ಪಡೆದ ಶ್ರೇಯಸ್ ಹಾಗೂ ತಾಲ್ಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವರದಿಗಾರ ಶರತ್ ಕುಮಾರ್, ಕೋಮಲಾಪುರದ ನಿಂಗೇಗೌಡ, ಹೆಚ್.ಎಸ್.ಮಂಜುನಾಥ, ಮಣಿಕಂಠ, ಹೊಸೂರ್ ಕುಮಾರ್, ಗೋವಿಂದ, ನಾಗೇಶ್, ಪ್ರಕಾಶ್ , ಆದಿಲ್, ಪ್ರಭಾಕರ್, ವೀಣಾ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕುಂಚಿಟಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ಹನುಮಂತನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್, ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥೆ ಡಾ.ನವಿತಾ ತಿಮ್ಮಯ್ಯ, ಐಕಾನಿಕ್ ಹಾಸ್ಪಿಟಲ್ ವ್ಯವಸ್ಥಾಪಕ ನಿರ್ದೇಶಕ ಭರತ್ ದೇವರಾಜಪ್ಪ , ತಾಲ್ಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಕಾರ್ಯಕ್ರಮದ ಸಂಚಾಲಕರಾದ ನಾಗಣ್ಣ ಗೌಡ, ಬಿ.ಎಸ್.ಕುಮಾರ್, ಒಕ್ಕಲಿಗ ಯುವ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು.

Tags:
error: Content is protected !!