Mysore
27
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸಂಚಾರ ನಿಯಮ ಉಲ್ಲಂಘನೆ : 55 ಕೇಸ್‌ ದಾಖಲು, ವಾಹನ ವಶಕ್ಕೆ

ಮೈಸೂರು : ದಸರಾ ಮುಗಿಯುತ್ತಿದ್ದಂತೆ ಮೈಸೂರು ನಗರಾದ್ಯಂತ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿ, ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕೇಸ್‌ ದಾಖಲಿಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ದಸರಾ ಮಹೋತ್ಸವದ ಅಂಗವಾಗಿ ಚೆಸ್ಕಾಂ ವತಿಯಿಂದ ಮೈಸೂರು ನಗರವನ್ನು ದೀಪಾಲಂಕಾರದ ಮೂಲಕ ನವ ವಧುವಿನಂತೆ ಶೃಂಗಾರಗೊಳಿಲಾಗಿತ್ತು. ಅದನ್ನು ವೀಕ್ಷಿಸಲು ಸಂಜೆ ನಂತರ ರಸ್ತೆಗಿಳಿಯುತ್ತಿರುವ ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಚರಣೆ ಆರಂಭಿಸಿ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ೫೫ ಪ್ರಕರಣಗಳನ್ನು ದಾಖಲಿಸಿದ್ದು ಇತರ ಪ್ರಕರಣಗಳಲ್ಲಿ ೫೨ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಮತ್ತು ಸ್ಥಳೀಯರು ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೆಲ್ಮೆಟ್ ರಹಿತ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ದೋಷ ಪೂರಿತ ನಂಬರ್ ಪ್ಲೇಟ್ ಇರುವ ವಾಹನ ಬಳಕೆ ಸೇರಿದಂತೆ ಅನೇಕ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದನ್ನು ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಗಮನಿಸುತ್ತಿದ್ದಾರೆ.

ಇದನ್ನು ಓದಿ: ಟ್ರಾಫಿಕ್‌ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ

ಸಂಜೆ ದೀಪಾಲಂಕಾರ ವೀಕ್ಷಿಸಲು ಬರುತ್ತಿರುವ ಯುವಕರ ಮೇಲೆ ತೀವ್ರ ನಿಗಾ ಇಟ್ಟಿರುವ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಜೊತೆಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದನ್ನು ಗಮನಿಸಿ, ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿ, ದೇವರಾಜ, ಕೃಷ್ಣರಾಜ, ನರಸಿಂಹರಾಜ, ಸಿದ್ದಾರ್ಥನಗರದ ಮತ್ತು ವಿವಿ ಪುರಂ ಠಾಣೆ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ಪ್ರಕರಣ ದಾಖಲಿಸುತ್ತಿದ್ದಾರೆ.

ಪ್ರಮುಖವಾಗಿ ಹಾರ್ಡಿಂಜ್(ಜಯಚಾಮರಾಜೇಂದ್ರ) ವೃತ್ತ, ಸಯ್ಯಾಜಿರಾವ್ ರಸ್ತೆ, ಬನ್ನಿಮಂಟಪ, ಡಿ.ದೇವರಾಜ ಅರಸು ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ, ಮಿಲೇನಿಯಂ(ಎಲ್‌ಐಸಿ ಸರ್ಕಲ್) ವೃತ್ತ, ಒಂಟಿಕೊಪ್ಪಲ್ ದೇವಸ್ಥಾನ ರಸ್ತೆ, ಕೆಆರ್‌ಎಸ್ ರಸ್ತೆ, ಮೈಸೂರು-ಬೆಂಗಳೂರು ಬಿಎನ್ ರಸ್ತೆ ಸೇರಿದಂತೆ ಮೈಸೂರು ನಗರಾದ್ಯಂತ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಪೊಲೀಸರು ಸಂಚಾರ ನಿಯಮವನ್ನು ಪಾಲಿಸದ ವಾಹನ ಸವಾರರಿಗೆ ದಂಡ ವಿಧಿಸಲು ಮುಂದಾಗಿದ್ದಾರೆ.

ಸಂಚಾರ ಠಾಣೆವಾರು ದಾಖಲಾದ ದೂರುಗಳು
ಮೈಸೂರು: ಸಂಚಾರ ವಿಭಾಗದ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ಸಂಚಾರಿ ಪೊಲೀಸರು, ದೇವರಾಜ ಠಾಣೆ ವ್ಯಾಪ್ತಿಯಲ್ಲಿ ೧೩, ಕೃಷ್ಣರಾಜ ಠಾಣೆ ವ್ಯಾಪ್ತಿಯಲ್ಲಿ ೨೧, ನರಸಿಂಹರಾಜ ಠಾಣೆ ವ್ಯಾಪ್ತಿಯಲ್ಲಿ ೧, ಸಿದ್ದಾರ್ಥ ನಗರ ಠಾಣೆ ವ್ಯಾಪ್ತಿಯಲ್ಲಿ ೧೧ ಹಾಗೂ ವಿವಿ ಪುರಂ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ೫೫ ತ್ರಿಬಲ್ ರೈಡಿಂಗ್ ಪ್ರಕರಣಗಳನ್ನು ದಾಖಲಿಸಿ ದಂಡ ವಿಽಸಿದ್ದಾರೆ. ಇತರೆ ಪ್ರಕರಣಗಳಲ್ಲಿ ದೇವರಾಜ ಠಾಣೆ ವ್ಯಾಪ್ತಿಯಲ್ಲಿ ೧೫, ನರಸಿಂಹರಾಜ ೨, ಸಿದ್ದಾರ್ಥ ನಗರ ೧೭, ವಿವಿ ಪುರಂ ಠಾಣೆ ವ್ಯಾಪ್ತಿಯಲ್ಲಿ ೧೮ ವಾಹನಗಳೂ ಸೇರಿದಂತೆ ೫೨ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

Tags:
error: Content is protected !!