Mysore
29
few clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಮೈಸೂರು| ಸಾಲು ಸಾಲು ರಜೆ ಹಿನ್ನೆಲೆ, ಪ್ರವಾಸಿಗರ ಸಂಖ್ಯೆ ಹೆಚ್ಚಳ; ಮೃಗಾಲಯದ ಮಂಗಳವಾರದ ರಜೆ ರದ್ದು

ಮೈಸೂರು: ಯುಗಾದಿ ಮತ್ತು ರಂಜಾನ್‌ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಹಿನ್ನೆಲೆ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರದ ವಾರದ ರಜೆಯನ್ನು ರದ್ದು ಮಾಡಲಾಗಿದೆ.

ಪ್ರತಿ ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇರುತ್ತದೆ. ಆದರೆ ಈ ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯದತ್ತ ಧಾವಿಸಿರುವ ಹಿನ್ನೆಲೆ ವಾರದ ರಜೆಯನ್ನು ರದ್ದು ಮಾಡಿ ನಾಳೆಯೂ(ಏಪ್ರಿಲ್‌.1) ಕೂಡ ಎಂದಿನಂತೆ ಮೃಗಾಲಯ ತೆರೆದಿರಲಿದೆ.

ಕಳೆದ ಮೂರು ದಿನಗಳಿಂದ ಸಾಲು ರಜೆ ಇರುವ ಕಾರಣ ಮೈಸೂರಿಗೆ ಆಗಮಿಸಿ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಿದ್ದಾರೆ. ಅಂತೆಯೇ ರಾಜ್ಯ ಹೊರ ರಾಜ್ಯಗಳಿಂದ ಮೃಗಾಲಯದತ್ತ ಆಗಮಿಸುತ್ತಿರುವ ಹಾಗೂ ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳ ನೋಡಿ ಖುಷಿ ಪಡುವ ಸ್ಥಳೀಯ ಪ್ರವಾಸಿಗರಿಗೆ ವಾರದ ರಜೆ ರದ್ದುಗೊಳಿಸಿ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.

Tags:
error: Content is protected !!