Mysore
24
broken clouds

Social Media

ಗುರುವಾರ, 12 ಡಿಸೆಂಬರ್ 2024
Light
Dark

ನಾಳೆ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ

ಮೈಸೂರು : ರಂಗಕರ್ಮಿ ಮೈಮ್ ರಮೇಶ್ ಅವರ ಜಿಪಿಐಇಆರ್ ತಂಡವು ಜುಲೈ 30ರಂದು ಸಂಜೆ 7 ಗಂಟೆಗೆ ನಗರದ ಕಲಾಮಂದಿರ ಪಕ್ಕದ ಕಿರು ರಂಗಮಂದಿರದಲ್ಲಿ ‘ಆಲ್ ರೈಟ್ ಮಂತ್ರ ಮಾಂಗಲ್ಯ’ ನಾಟಕ ಪ್ರಸ್ತುತಪಡಿಸಲಿದೆ.

ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಅವರ ಹೊಸ ನಾಟಕ ಇದಾಗಿದ್ದು, ಕುವೆಂಪು ಅವರ ಮಂತ್ರ ಮಾಂಗಲ್ಯ ಆಧರಿಸಿದೆ.
ಈ ನಾಟಕದ ವಿನ್ಯಾಸ ಹಾಗೂ ನಿರ್ದೇಶನ ರಂಗಾಯಣದ ಕಲಾವಿದರಾಗಿದ್ದ ಮೈಮ್ ರಮೇಶ್ ಅವರದು. ಎನ್ ಎಸ್ ಡಿ ಪದವೀಧರ ಜಗದೀಶ್ ಆರ್.ಜಾಣಿ ಸಂಗೀತ ನೀಡಲಿದ್ದಾರೆ.

ನಾಟಕಕ್ಕೆ ಮುನ್ನ ನಾಟಕದ ಕೃತಿಯು ಪ್ರೇಕ್ಷಕರಿಂದ ಬಿಡುಗಡೆಗೊಳ್ಳಲಿದೆ ಎಂದು ಜಿಪಿಐಇಆರ್ ತಂಡದ ಸಂಚಾಲಕ ಎಂ.ಪಿ.ಹರಿದತ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ