Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹುಲಿ ಪ್ರತ್ಯಕ್ಷ: ಭಯಭೀತರಾಗಿ ಓಡಿದ ಬಳ್ಳೂರು ಹುಂಡಿ ಗ್ರಾಮಸ್ಥರು

ಮೈಸೂರು: ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿಯಲ್ಲಿ ಭಾನುವಾರ ಹಾಡಹಗಲೇ ಹುಲಿ ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮದಲ್ಲಿ ಕೆಲಕಾಲ  ಭಯದ ವಾತಾವರಣ ಸೃಷ್ಟಿಯಾಗಿತ್ತು.

ಗ್ರಾಮದ ಬಳ್ಳೂರು ಕಟ್ಟೆ ಬಳಿ ಗುರುವಾರ ಮಧ್ಯಾಹ್ನ ಜಮೀನಿನನ ಕೆಲಸ ಮಾಡುತ್ತಿದ್ದಾಗ ಹಠಾತ್ ಹುಲಿ ದರ್ಶನವಾಗಿದೆ. ಇದರಿಂದ ಬೆಚ್ಚಿ ಬಿದ್ದ ಕೃಷಿ ಕೆಲಸಗಾರರು ಗ್ರಾಮದತ್ತ ದೌಡಾಯಿಸಿದರು.

ಬೆಚ್ಚಿಬಿದ್ದ ಜನ
ಓಡುತ್ತಿದ್ದ ಜನರನ್ನು ಕಂಡ ಹುಲಿ ಬೆನ್ನಟ್ಟಿ ಬಂದಾಗ ಮತ್ತೆ ಭಯಬೀತರಾದ ಜನರು ವೇಗವಾಗಿ ಗ್ರಾಮದತ್ತ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಕೆಲ ವರ್ಷಗಳ ಹಿಂದೆ ಹುಲಿಯೊಂದು ಇದೇ ಗ್ರಾಮದ ಸ್ವಾಮಿ ಎಂಬವರರನ್ನು ಬಲಿ ಪಡೆದಿತ್ತು. ಜತೆಗೆ ಈ ವರ್ಷದ ಆರಂಭದಲ್ಲಿ ರತ್ನಮ್ಮ ಎಂಬವರ ಮೇಲೂ ಹುಲಿ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು. ಬಳಿಕ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿದು ಕಾಡಿಗಟ್ಟಿದ್ದರು. ಇದೀಗ ಈ ಘಟನೆಗಳು ಮಾಸುವ ಮುನ್ನವೇ ಮತ್ತೆ ಹುಲಿ ಕಾಣಿಸಿಕೊಂಡು, ಜನತೆಯನ್ನು ಭಯಬೀತರನ್ನಾಗಿ ಮಾಡಿದೆ. ಅಷ್ಟೇ ಅಲ್ಲದೇ ಗ್ರಾಮಸ್ಥರು ಜಾನುವಾರುಗಳನ್ನು ಜಮೀನಿಗೆ ಮೇಯಲು ಬಿಡಲಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ

ಹುಲಿ ಕಂಡ ತಕ್ಷಣ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ  ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಳ್ಳೂರು ಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಹುಲಿಯನ್ನು ಕಾಡಿನತ್ತ ಕಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

 

 

Tags: