ಮೈಸೂರು : ಒಂಟಿ ಸಲಗವೊಂದು ಹುಲಿಯನ್ನು ಅಟ್ಟಿಸಿದ ಘಟನೆ ಎಚ್.ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಜರುಗಿದೆ.
ಈ ಅಪರೂಪದ ದೃಶ್ಯ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಸಲಗದ ಆರ್ಭಟಕ್ಕೆ ಬೆದರಿ ಹುಲಿರಾಯ ಓಡುತ್ತಿದೆ.
ಇದನ್ನೂ ಓದಿ:- ಅನ್ನದಾತರ ಅಂಗಳ | ಕೃಷಿಕರಿಗೆ ವಾರದ ಸಲಹೆಗಳು
ಸಹಜವಾಗಿ ಹುಲಿ ಆನೆಯನ್ನ ಹೆದರಿಸುತ್ತದೆ. ಆದರೆ ಇಲ್ಲಿ ಹುಲಿಯನ್ನೇ ಗಜರಾಜ ಅಟ್ಟಾಡಿಸಿ ಓಡಿಸಿರುವ ಅಪರೂಪದ ಘಟನೆ ನಡೆದಿದೆ.





