Mysore
23
broken clouds
Light
Dark

ನಾನಿದ್ದ ಪಕ್ಷ ನನಗೆ ನೀಡಬೇಕಾದ ಗೌರವ ನೀಡಲಿಲ್ಲ : ಹೆಚ್‌.ವಿ.ರಾಜೀವ್‌

ಮೈಸೂರು : ಮೂರು ದಶಕಗಳಿಂದ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ನನಗೆ ಸಿಗಬೇಕಾದ ಮಾನ್ಯತೆ ಗೌರವ ನಾನಿದ್ದ ಪಕ್ಷದಿಂದ ಸಿಗಲಿಲ್ಲ ಎಂದು ಹೆಚ್‌.ವಿ.ರಾಜೀವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಸುಮಾರು ಮೂರು ದಶಕಗಳಿಂದ ಸಮಾಜದಲ್ಲಿ ನಿರಂತರವಾಗಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದ ನನಗೆ ನೀಡಬೇಕಾದ ಗೌರವ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಸರ, ಸ್ವಚ್ಛ ಭಾರತ, ಸಾಮಾಜಿಕ ಕ್ಷೇತ್ರದ ಕೆಲಸ, ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಹಾಗೂ ರಾಜಕೀಯ ಸಂಘಟನೆಯ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ.

ಆದರೆ, ಇಷ್ಟೆಲ್ಲಾ ಕೆಲಸ ಮಾಡಿದರೂ ನಾನಿದ್ದ ಪಕ್ಷ ನನಗೆ ನೀಡಬೇಕಾದ ಗೌರವ ನೀಡಲಿಲ್ಲ ಎಂಬ ನೋವು ನನಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನುಡಿದಂತೆ ನಡೆವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ : ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಧನ, ನೆಮ್ಮದಿಯಿಂದ ಬದುಕುವ ಯೋಜನೆ ನೀಡುವುದು ಸರ್ಕಾರದ ಕೆಲಸ. ತವರು ಜಿಲ್ಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೆಲ್ಲ ಘೋಷಣೆ ಮಾಡಿದ್ದರೋ ಅದನ್ನೆಲ್ಲಾ ಮಾಡಿದ್ದಾರೆ ಎಂದು ಹೆಚ್‌.ವಿ.ರಾಜೀವ್‌ ತಿಳಿಸಿದರು.

ನುಡಿದಂತೆ ನಡೆವ, ಹೇಳಿದಂತೆ ನಡೆವ ಏಕಮೇವ ಮುಖ್ಯಮಂತ್ರಿ ಎಂದರೆ ಅದುಉ ಸಿದ್ದರಾಮಯ್ಯ ಅವರಲ್ಲಿ ನೀಡಲು ಸಾಧ್ಯವಾಯಿತು ಎಂದರು.

ಕಾಂಗ್ರೆಸ್‌ ಸೇರಲು ಪಂಚ ಗ್ಯಾರೆಂಟಿ ಕಾರಣ: ಕಟ್ಟಕಡೆಯ ಬಡವ ತನ್ನ ಮನೆಯಲ್ಲಿ ನೆಮ್ಮದಿಯಿಂದ ಊಟ ಮಾಡಿ, ಆತಂಕ ಇಲ್ಲದ ಬದುಕಾಗಬೇಕು ಎಂಬ ಚಿಂತನೆ ಮತ್ತು ಯೋಜನೆ ಬಗ್ಗೆ ಹೇಳಿದ್ದಾಗ ಎಲ್ಲರೂ ಟೀಕೆ ಮಾಡಿದ್ದರು.

ಆದರೆ ಸಿದ್ದರಾಮಯ್ಯ ಅವರು ಅದನ್ನೇಲ್ಲಾ ಬದಿಗಿಟ್ಟು ಎಲ್ಲಾ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ರೀತಿ ನನ್ನ ಹೃದಯಕ್ಕೆ ಮುಟ್ಟಿ, ಬಡವರ ಧ್ವನಿಯಗಿರುವಂತ ಪಕ್ಷ ಹಾಗೂ ಸರ್ಕಾರದಲ್ಲಿ ನನ್ನ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಸೇರಿದ್ದೇನೆ ಎಂದರು.