Mysore
22
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಗೃಹಿಣಿ ಅನುಮಾನಾಸ್ಪದ ಸಾವು : ಪತಿ ವಿರುದ್ಧ ಕೊಲೆ ಆರೋಪ

ಮೈಸೂರು : ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.

ಮೈಸೂರಿನ ದರ್ಶಿನಿ (21) ಮೃತ ದುರ್ದೈವಿ. ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಈಕೆಯ ಪತಿ ಸೂರ್ಯ ಹೇಳಿದ್ದಾನೆ. ಕೆ.ಆರ್.ಆಸ್ಪತ್ರೆಗೆ ದರ್ಶಿನಿಯನ್ನು ದಾಖಲಿಸಿ ಪತ್ನಿಯ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಪತಿ ಸೂರ್ಯನೇ ಪತ್ನಿಯನ್ನು ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯನ ಜೊತೆ ದರ್ಶಿನಿಯ ಪ್ರೇಮ ವಿವಾಹವಾಗಿತ್ತು. ಮನೆಯವರ ವಿರೋಧದ ನಡುವೆಯೂ ದರ್ಶಿನಿಯನ್ನು ಸೂರ್ಯ ಮದುವೆಯಾಗಿದ್ದ.ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಪ್ರತಿ ದಿನ ವರದಕ್ಷಿಣೆ ತರುವಂತೆ ಮಗಳನ್ನು ಹಿಂಸಿಸುತ್ತಿದ್ದ. ಬದುಕಿ ಬಾಳಬೇಕಿದ್ದ ನನ್ನ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸೂರ್ಯ ಮತ್ತು ಆತನ ಕುಟುಂಬಸ್ಥರನ್ನ ಬಂಧಿಸಬೇಕು ಎಂದು ಮೃತಳ ಪೋಷಕರು ಆಗ್ರಹಿಸಿದ್ದಾರೆ.

ಘಟನೆ ಸಂಬಂಧ ಕೆಆರ್‌ಎಸ್‌ ಠಾಣೆಯಲ್ಲಿ ಪತಿ ಹಾಗೂ ಮನೆಯವರ ವಿರುದ್ಧ ದರ್ಶನಿ ಪೋಷಕರು ದೂರು ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!