Mysore
20
overcast clouds
Light
Dark

ಹಳೆ ಬಾಕಿ – ಹೊಸಾ ದರ ತಿರ್ಮಾನವಾದ ಮೇಲೆ ಕಬ್ಬು ಸರಬರಾಜು : ಶಾಂತಕುಮಾರ್‌

ನಂಜನಗೂಡು : ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬುದರ 4000 ಘೋಷಣೆ ಮಾಡಲಿ. ರೈತರ ಹಳೆ ಬಾಕಿ ಟನ್ಗೆ 150 ರೂ ಕೊಡಬೇಕು ನಂತರ ಕಬ್ಬು ಸರಬರಾಜು ಮಾಡಲು ತೀರ್ಮಾನ ಮಾಡುತೇವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂದೆ ಸಾವಿರಾರು ರೈತರು ಸಮಾವೇಶಗೊಂಡು ಸಕ್ಕರೆ ಕಾರ್ಖಾನೆಗೆ ಎಚ್ಚರಿಕೆ ಸಂದೇಶ ನೀಡುವ ವೇದಿಕೆಯಲ್ಲಿ ಟಮಟೆ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರ ರೈತರಿಗೆ ಕಬ್ಬು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಕಬ್ಬಿನ ದರ ನಿಗದಿಯಾಗುತ್ತಿದೆ. ಬಣ್ಣಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ಅತಿ ಕಡಿಮೆ ದರ ನೀಡುತ್ತಿದೆ ಈ ಕಾರ್ಖಾನೆ ಕಳೆದ ವರ್ಷ 12.40 ಲಕ್ಷ ಟನ್ ಕಬ್ಬುನುರಿಸಿ ಸಕ್ಕರೆ ಇಳುವರಿ 9.14 ತೋರಿಸಿದ್ದಾರೆ. ಈ ವರ್ಷ 8 ಲಕ್ಷ ಟನ್ ಕಬ್ಬು ಮಾತ್ರ ರೈತರು ಬೆಳೆದಿದ್ದಾರೆ. ಸಕ್ಕರೆ ಕಾರ್ಖಾನೆಯವರು ರೈತರ ಸಂಘಟನೆಗಳನ್ನ ಒಡೆದು ಆಳುವ ಮೂಲಕ ನಿರಂತರವಾಗಿ ರೈತರನ್ನ ಶೋಷಣೆ ಮಾಡುತ್ತಿದೆ ಎಂದು ಅರೋಪ ಮಾಡಿದರು.

ಕಳೆದ ವರ್ಷ ಬರಗಾಲದ ಕಾರಣ ಶೇಕಡ 30ರಷ್ಟು ಕಬ್ಬು ಕಡಿಮೆಯಾಗಿದೆ. ಸಕ್ಕರೆ ಕಾರ್ಖಾನೆಗಳು ಈಗ ರೈತರನ್ನ ಕಬ್ಬು ಬೆಳೆಯುವಂತೆ ಪರಿತಪಿಸುವ ಸ್ಥಿತಿ ಬಂದಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಈ ರೀತಿ ಆದರೆ ರಾಜ್ಯದ ರೈತರ ಗತಿ ಏನು? ಎನ್ನುವಂತಾಗಿದೆ  ಎಂದರು.

ಕಬ್ಬು ಬೆಳೆಗಾರ ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಖಂಡಿತ ನ್ಯಾಯ ಸಿಗುತ್ತದೆ ನಾವು 2004ರಲ್ಲಿ ಚಳುವಳಿ ಆರಂಭಿಸಿದಾಗ ಟನ್ 800 ಇತ್ತು. ಇಂದು 3400 ಸರ್ಕಾರ ನಿಗದಿ ಮಾಡಿದೆ ಇದು ರೈತರ ಹೋರಾಟದ ಶ್ರಮದಿಂದ ಎಂಬುದನ್ನು ಮರೆಯಬಾರದು ಎಂದರು.

ಬೇಡಿಕೆಗಳು :

  • ಪ್ರಸಕ್ತ ಸಾಲಿನ ಕಬ್ಬಿನ ದರ ಟನ್ಗೆ 4000 ನಿಗದಿ ಕಳೆದ ವರ್ಷದ ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ. ಕೂಡಲೇ ಮಾಡಬೇಕು
  • 2022-23 ನೇ ಸಾಲಿನ ವರ್ಷದ ಕಬ್ಬಿನ ಎಫ್‌ಆರ್‌ಪಿ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ದರ 150/-ರೂ ಕಾರ್ಖಾನೆ ಕೂಡಲೆಬೇಕು.
  • ಬಣ್ಣಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ದೀಪಕ್ಷಿಯ ಒಪ್ಪಂದ ಪತ್ರ ಜಾರಿ ಮಾಡದೆ ರೈತರಿಗೆ ವಂಚನೆ ಮಾಡುತ್ತಿದೆ,ಸರ್ಕಾರದ ದೀಪಕ್ಷಿಯ ಒಪ್ಪಂದ ಪತ್ರ ಡಿಜಿಟಲಿಕರಣ ಹ್ಯಾಪ್ ಮೂಲಕ ಜಾರಿ ಮಾಡಬೇಕು.
  • ಕಳೆದ ಆರು ವರ್ಷಗಳಿಂದ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಉಪ ಉತ್ಪನ್ನಗಳ ಲಾಭವಿಲ್ಲ ಎಂದು ತೋರಿಸಿ ವಂಚನೆ ಮಾಡುತ್ತಾ ಬಂದಿರುವ ಬಗ್ಗೆ ತನಿಖೆಯಾಗಬೇಕು.
  • ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಕಾರ್ಖಾನೆ ಮುಂದೆ ಸರ್ಕಾರದ ವತಿಯಿಂದ ಡಿಜಿಟಲ ತೂಕದ ಯಂತ್ರ ನಿರ್ಮಾಣ ಮಾಡಬೇಕು.
  • ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಸರ್ಕಾರ ಸೂಚನೆ ಮಾಡಿದ ದರಕ್ಕಿಂತ ಹೆಚ್ಚು ಕಡಿತ ಮಾಡಿ ರೈತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಇದು ನಿಲ್ಲಬೇಕು.
  • ರೈತರ ಕಬ್ಬು ಕಾರ್ಖಾನೆ ತಲುಪಿದ ತಕ್ಷಣ ಕಬ್ಬನ್ನು ತೂಕ ಮಾಡಿ ರೈತರಿಗೆ ಎಸ್ ಎಂ ಎಸ್ ಮೂಲಕ ಸಂದೇಶ ನೀಡಬೇಕು.
  • ರೈತರ ಕಬ್ಬು ನಾಟಿ ಮಾಡಿ ಒಪ್ಪಂದ ಮಾಡಿಕೊಳ್ಳುವಾಗ ರೈತರಿಂದ ಬಲವಂತವಾಗಿ 14 ತಿಂಗಳಿಗೆ ಕಬ್ಬು ಕಟಾವು ಮಾಡಲು ನನ್ನ ಒಪ್ಪಿಗೆ ಇದೆ ಎಂದು ಕಾನೂನು ಬಾಹಿರವಾಗಿ ಸಹಿ ಮಾಡಿಸಿಕೊಳ್ಳುವುದು ನಿಲ್ಲಬೇಕು. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ರೈತರಿಗೆ ಕಬ್ಬು ಕಟಾವು ಕೂಲಿ ಬಿಲ್ಲಲ್ಲಿ ಹಾಗೂ ತೂಕದ ಚೀಟಿಯಲ್ಲಿ ನಮೂದಿಸಬೇಕು ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು.
  • ಕಬ್ಬು ವಿದ್ಯುತ್ ಸಾರ್ಟ ಸರ್ಕ್ಯೂಟ್ ನಿಂದ ಸುಟ್ಟು ಹಾನಿಯಾದಾಗ ಕಾರ್ಖಾನೆಯವರು ಕಬ್ಬಿನ ಹಣದಲ್ಲಿ 25 ಪರ್ಸೆಂಟ್ ಕಡಿತ ಮಾಡುತ್ತಿರುವುದನ್ನು ನಿಲ್ಲಿಸಿ .ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ಹಣ ಪೂರ್ತಿ ಕೊಡಬೇಕು.
  • ಕಬ್ಬು ಪೂರೈಕೆ ಮಾಡಿದ ಎಲ್ಲಾ ರೈತರಿಗೂ ಕಡ್ಡಾಯವಾಗಿ ಮೊಬೈಲ್ ಸಂದೇಶದ ಮೂಲಕ ಕಬ್ಬಿನ ಹಣ ಪಾವತಿ ಬಗ್ಗೆ ಬಿಲ್ ಗಳನ್ನು ರವಾನಿಸಬೇಕು.

ಸಕ್ಕರೆ ಕಾರ್ಖಾನೆಗಳು ಪೈಪೋಟಿಯಿಂದ ಕಬ್ಬು ಖರೀದಿಸಲು ಮುಂದಾಗುತ್ತಿದ್ದಾರೆ ಈಗಾಗಲೇ ಬೇರೆ ಜಿಲ್ಲೆಯ ಕಾರ್ಖಾನೆಯವರು ಸಾಗಾಣಿಕೆ ವೆಚ್ಚ ನಾವೇ ಕೊಡುತ್ತೇವೆ ನಮಗೆ ಕೊಡಿ ಎಂದು ಹೇಳುತ್ತಿದ್ದಾರೆ. ಹೊಸದಾಗಿ ಕಬ್ಬು ಹಾಕುವ ರೈತರಿಗೆ ಎಕರೆಗೆ 8000 ಪ್ರೋತ್ಸಾಹ ಧನ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ರೈತರು ಸಮಸ್ಯೆ ಬಗೆಹರಿಯೋ ತನಕ ಕಬ್ಬು ಸರಬರಾಜು ಮಾಡುವುದಿಲ್ಲ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎನ್ನುವ ತೀರ್ಮಾನ ಕೈಗೊಳ್ಳಲಾಯಿತು ಎಂದರು.

ಸಮಾವೇಶದ ಸ್ಥಳಕ್ಕೆ ಬಂದ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಕ ಅಧ್ಯಕ್ಷ ವೇಲುಸ್ವಾಮಿ ಮಾತನಾಡಿ ಈ ವರ್ಷ ಟನ್ಗೆ 3150 ಧರ ನಿಗದಿಯಾಗಿದೆ ಕಬ್ಬು ನಾಟಿ ಮಾಡುವ ರೈತರಿಗೆ ಎಕರೆಗೆ 7,000 ಪ್ರೋತ್ಸಾಹಧನ ನೀಡಲಾಗುವುದು ಕಳೆದ ವರ್ಷದ ಬಾಕಿ 150ರೂ ಪಾವತಿಸುವ ಬಗ್ಗೆ ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಲಾಗುವುದು ಎಂದರು.

ಸಮಾವೇಶದಲ್ಲಿ ನಂಜನಗೂಡು ತಾಲೂಕು ಅಧ್ಯಕ್ಷ ವಿಜಯೇಂದ್ರ ಅಧ್ಯಕ್ಷತೆ ವಹಿಸಿದರು ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಕಿರಗಸೂರ ಶಂಕರ್. ನೀಲಕಂಠಪ್ಪ.
ಅಂಬಳೆ ಮಂಜುನಾಥ್. ಸಿದ್ದೇಶ್. ಚಾಮರಾಜನಗರ ಜಿಲ್ಲೆಯ ರೇವಣ್ಣ. ಮಹದೇವಸ್ವಾಮಿ ಶಿವಮೂರ್ತಿ. ಪೈಲ್ವಾನ್ ವೆಂಕಟೇಶ್. ಕಮಲಮ್ಮ,ಜಿಲ್ಲಾ ಉಪಾಧ್ಯಕ್ಷ ಸಿಂಧುವಳ್ಳಿ ಬಸವಣ್ಣ, ಜಿಲ್ಲಾ ಕಾರ್ಯದಕ್ಷ ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಪರಶಿವಮೂರ್ತಿ, ಕೆಂಡಗಣ್ಣ ಸ್ವಾಮಿ, ಅಂಬಳೆ ಮಂಜುನಾಥ್, ದೇವನೂರು ಮಹದೇವಸ್ವಾಮಿ, ಮೈಸೂರು ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಟಿ ನರಸೀಪುರ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಹೆಚ್ ಕೋಟೆ ಅಧ್ಯಕ್ಷ ಹಂಪಾಪುರ ರಾಜೇಶ್, ಚಾಮರಾಜನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹಾದೇವಸ್ವಾಮಿ, ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ನಂಜದೇವನಪುರ ಸತೀಶ್,ಮಾದೇಶ, ಕಿಣಕನಹಳ್ಳಿ ಬಸವಣ್ಣ,ಕುರುಬೂರು ಪ್ರದೀಪ್, ಗೌರಿಶಂಕರ್, ಕೆಜಿ ಗುರುಸ್ವಾಮಿ, ಪ್ರಸಾದ್ ನಾಯ್ಕ,ಹೆಗ್ಗೂರು ರಂಗರಾಜು, ವರಕೋಡು ನಾಗೇಶ್, ಬನ್ನೂರು ಸೂರಿ, ಚುಂಚುರಾಯನ ಹುಂಡಿ ನಂಜುಂಡಸ್ವಾಮಿ, ಸಿದ್ದರಾಮ, ಗಿರೀಶ್, ದೊಡ್ಡ ಕಾಟೂರು ಮಾದೇವಸ್ವಾಮಿ, ನಾಗೇಶ್, ವಾಜಮಂಗಲ ಮಾದೇವು, ಮಾಲಿಂಗ ನಾಯಕ, ತರಕಾರಿ ನಿಂಗರಾಜು, ಅಪ್ಪಣ್ಣ, ಕೋಟೆ ಸುರೇಶಶೆಟ್ಟಿ, ಸುನಿಲ್ ಕುಮಾರ್, ಸುಮಾರು 400ಕ್ಕೂ ಹೆಚ್ಚು ಕಬ್ಬು ಬೆಳಗಾರ ರೈತರು ಭಾಗವಹಿಸಿದ್ದರು.