Mysore
23
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪ್ರಿಯಕರನನ್ನು ಅರಸಿ ಬಂದ ಯುವತಿಯಿಂದ ಆತ್ಮಹತ್ಯೆ ಹೈಡ್ರಾಮ

ನಂಜನಗೂಡು : ಪ್ರಿಯಕರನನ್ನು ಕರೆಸದಿದ್ದರೆ ಕಟ್ಟಡದಿಂದ ಹಾರಿ ಆತಮಹತ್ಯೆ ಮಾಡಿಕೊಳ್ಳುವುದಾಗಿ  ಯುವತಿ ಒಬ್ಬಳು ಕಟ್ಟಡ ಏರಿ ನಿಂತ ಘಟನೆ ನಗರದ ಲಾಡ್ಜ್‌ ಒಂದರಲ್ಲಿ ನಡೆದಿದೆ.

ಇಂದು ಬೆಳಗ್ಗೆ ಪಟ್ಣಣದ ರಾಷ್ಟ್ರಪತಿ ರಸ್ತೆಯಲ್ಲಿರುವ ಹನಿಡ್ಯೂ ಲಾಡ್ಜ್‌ನಲ್ಲಿಯುವತಿ ಒಬ್ಬಳ ಆತ್ಮಹತ್ಯೆ ಹೈಡ್ರಾಮ ನಡೆದಿದೆ.

ಯುವತಿ ಬಿಹಾರಿ ಮೂಲದವಳಾಗಿದ್ದು, ಪಟ್ಟಣದ ಹೊರವಲಯದಲ್ಲಿರುವ ಏಶಿಯನ್‌ ಪೇಂಟ್ಸ್‌ನಲ್ಲಿ ಕಾರ್ಮಿಕನಾಗಿದ್ದ ಬೀಹಾರಿ ಮೂಲದ ಯುವಕನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದೆ.

ಆತನನ್ನು ಭೇಟಿ ಮಾಡಲು ಬಿಹಾರದಿಂದ ಬಂದಿದ್ದ ಯುವತಿಗೆ, ತನ್ನ ಪ್ರಿಯತಮ ಹನಿಡ್ಯೂ ಲಾಡ್ಜ್‌ನಲ್ಲಿ ಇರುವುದು ತಿಳಿದುಬಂದಿದೆ.

ಅಲ್ಲಿ ಆತ ಇಲ್ಲದಿರುವುದನ್ನು ತಿಳಿದು ಆಕೆ ಬೇಸರದಿಂದ ಲಾಡ್ಜ್‌ ಮೇಲ್ಮಹಡಿಗೆ ತೆರಳಿ, ಯುವಕನನ್ನು ಕರೆಸದಿದ್ದರೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಕೂಡಲೆ ಲಾಡ್ಜ್‌ನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಸಿಬ್ಬಂದಿ ಯುವತಿಯನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಪಟ್ಟಣ ಪೊಲೀಸರು ತನಿಖೆ ನಡೆಸಿದ್ದಾರೆ.

Tags:
error: Content is protected !!