Mysore
28
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ನಾನು ನೋಡಿದ ನಿಸ್ಪೃಹ ಮನಸ್ಸಿನ ರಾಜಕಾರಣಿ ಶ್ರೀನಿವಾಸ ಪ್ರಸಾದ್‌ : ಪ್ರತಾಪ್‌ ಸಿಂಹ !

ಮೈಸೂರು :  ನಿಸ್ಪೃಹ ಮನಸ್ಸಿನ ರಾಜಕಾರಣಿಯೇನಾದರು ಇದ್ದರೆ ಅದು ಶ್ರೀನಿವಾಸ ಪ್ರಸಾದ್‌ ಮಾತ್ರ ಎಂದು ಸಂಸದ ಪ್ರತಾಪ್‌ ಸಿಂಹ ಅಭಿಪ್ರಯಾ ವ್ಯಕ್ತಪಡಿಸಿದರು.

ದಿವಂಗತ ಸಂಸದ ವಿ ಶ್ರೀನಿವಾಸ ಪ್ರಸಾದ್‌ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೦ ವರ್ಷದ ನನ್ನ ರಾಜಕಾರಣದಲ್ಲಿ ಎಲ್ಲಾ ರೀತಿಯ ಎಲ್ಲಾ ವಿಧದ ರಾಜಕಾರಣಿಗಳನ್ನು ನೋಡಿದ್ದೇನೆ. ಆದರೆ ಹಳೆ ಮೈಸೂರಿನ ನಿಶ್ಪೃಹ ಮನಸ್ಸಿನ ಏಕಮಾತ್ರ ವ್ಯಕ್ತಿ ಎಂದರೆ ಅದು ಶ್ರೀನಿವಾಸ ಪ್ರಸಾದ್‌ ಎಂದರು.

ಈ ಭಾಗದಲ್ಲಿ ದ್ವೇಷ-ಅಸೂಯೆ ಇಲ್ಲದಂತ ಒಬ್ಬನೇ ಒಬ್ಬ ರಾಜಕಾರಣೀ ಎಂದರೆ ಅದು ಶ್ರೀನಿವಾಸ ಪ್ರಸಾದ್‌. ನನಗೆ ವಯಕ್ತಿಕವಾಗಿ ನೋವಾಗಿದೆ. ಮೊದಲ ಬಾರಿ ಸಂಸದನಾಗಿದ್ದಾಗ ಅವರು ಮೈಸೂರಿನ ಉಸ್ತುವಾರಿ ಸಚಿವರಾಗಿದ್ದರು, ಪಕ್ಷ ಬೇರೆಯಾಗಿದ್ದರು ಒಂದು ದಿನ ನನ್ನನ್ನು ಬೇರೆಯವನಂತೆ ಕಂಡಿರಲಿಲ್ಲ ಎಂದರು.

ನಾನು ಸಂಸದನಾದ ಬಳಿಕ ಮೈಸೂರು ಭಾಗದಲ್ಲಿ ಒಂದು ದಿನಕ್ಕು-ಒಂದು ಕ್ಷಣಕ್ಕು ನನ್ನು ಟೀಕೆ ಮಾಡದಂತ ಮನಸ್ಸಿದ್ದರೆ ಅದು ಪ್ರಸಾದ್‌ ಸಾಹೇಬರು ಎಂದು ಹೇಳುವ ವೇಳೆ ಸಂಸದ ಪ್ರತಾಪ್‌ ಸಿಂಹ ಗದ್ಗತಿತರಾದರು.

ಒಳ್ಳೆ ರಾಜಕಾರಣಿಗಳಿಗೆ ಕಾಲನೇ ಇಲ್ಲವೇನೋ ! : ಈತ್ತೀಚೆಗೆ ಮಾಜಿ ಸಂಸದರಾದ ಧೃವನಾರಾಯಣ್‌ ಅವರು ತೀರಿಹೋದರು. ಈಗ ಸಂಸದರಾದ ಶ್ರೀನಿವಾಸ ಪ್ರಸಾದ್‌ ತೀರಿಹೋಗಿದ್ದಾರೆ. ಯಾಕೋ ಈ ಮೈಸೂರು ಭಾಗದಲ್ಲಿ ಒಳ್ಳೆ ರಾಜಕಾರಣಿಗಳಿಗೆ ಕಾಲನೇ ಇಲ್ಲವೇನೋ ಎಂದು ಅನ್ನಿಸಿಬಿಡುತ್ತದೆ ಎಂದು ದುಖಿತರಾಗಿ ಭಾವುಕರಾದರು.

Tags:
error: Content is protected !!