ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರು ಮೈಸೂರಿನ ಖಾಸಗಿ ಹೋಟೆಲ್‌ಗೆ ಕೊಲೆ ಪ್ರಕರಣದ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದರು.
ಆರೋಪಿಗಳಾದ ನಾಗರಾಜ್ ಅಲಿಯಾಸ್ ನಾಗ, ಲಕ್ಷ್ಮಣ್ ಅವರನ್ನು ಇಂದು ಬೆಂಗಳೂರಿನಿಂದ ಪೊಲೀಸ್ ವಾಹನದಲ್ಲಿ ಮೈಸೂರಿನ ಖಾಸಗಿ ಹೋಟೆಲ್ ರ್ಯಾಡಿಸನ್ ಬ್ಲೂಗೆ ಕರೆತಂದು ಸ್ಥಳ ಮಹಜರು ನಡೆಸಿದರು. ಹೋಟೆಲ್‌ನಲ್ಲಿ ದರ್ಶನ್ ತಂಗಿದ್ದ ರೂಂ, ಅಲ್ಲಿನ ಓಡಾಟ ಹಾಗೂ ಎಲ್ಲಾ ಮೂಲಮೂಲೆಗಳನ್ನು ಜಾಲಾಡಿರುವ ಪೊಲೀಸರು ಅಗತ್ಯ ದಾಖಲೆಗಳನ್ನು ಕಲೆಹಾಕಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರಿನ ಬಳಿಕ ಆರೋಪಿಗಳನ್ನು ಮತ್ತೆ ಬೆಂಗಳೂರಿಗೆ ವಾಪಸ್ ಕರೆದೊಯ್ದಿದ್ದಾರೆ.