Mysore
31
few clouds

Social Media

ಬುಧವಾರ, 01 ಏಪ್ರಿಲ 2026
Light
Dark

ಎಸ್‌ಐಟಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ: ಎಚ್‌ಡಿ ಕುಮಾರಸ್ವಾಮಿ

ಮೈಸೂರು: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅನವಶ್ಯಕವಾಗಿ ಬೇರೆಯವರನ್ನು ಬಂಧಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ದೂರಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎರಡು ಭಾಗಗಳಿದೆ. ಒಂದು ವಿಡಿಯೋ ಮಾಡಿಕೊಂಡವನು ಇನ್ನೊಂದು ವಿಡಿಯೋ ಹರಿಯಬಿಟ್ಟವನು. ಇದೊಂದು ಘೋರ ಅಪರಾಧ. ಎಸ್‌ಐಟಿ ಈವರೆಗೆ ವಿಡಿಯೋ ವೈರಲ್‌ ಮಾಡಿದವರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಆರೋಪಿ ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡುತ್ತಾರೆ. ಆದರೆ ಅವರು ಎಸ್‌ಐಟಿ ಕೈಗೆ ಸಿಗುವುದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಪ್ರಜ್ವಲ್‌ ವಿದೇಶದಲ್ಲಿರುವ ಬಗ್ಗೆ ಮಾತನಾಡಿ, ಪ್ರಜ್ವಲ್‌ ಪಕ್ಷದಲ್ಲಿದ್ದಾಗಲೇ ನಮ್ಮ ಕೈಗೆ ಹಾಗೂ ಕಾರ್ಯರ್ತರ ಕೈಗೆ ಸಿಗುತ್ತಿರಲಿಲ್ಲ. ಇನ್ನು ವಿದೇಶದಲ್ಲಿರುವುದಾಗ ಹೇಗೆ ಸಿಗುತ್ತಾನೆ ಎಂದು ಕಿಡಿಕಾರಿದರು.

ಇನ್ನು ದೇವರಾಜೇಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಮಾತನಾಡಿದ ಎಚ್‌ಡಿಕೆ ಎಸ್‌ಐಟಿ ದೇವರಾಜೇಗೌಡರನ್ನು ಯಾಕೆ ಬಂಧಿಸಿದ್ದಾರೆ. ಅವರಿಂದ ಯಾವ ಮಾಹಿತಿ ಬೇಕಿದೆ ಎಂದು ಬಂಧಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ ಪ್ರಕರಣವಾ? ಅತ್ಯಾಚಾರ ಮಾಹಿತಿ ಸಂಬಂಧವಾ? ಅಥವಾ ಆಡಿಯೋ ವೈರಲ್‌ ಮಾಹಿತಿ ಸಂಬಂಧ ವಿಚಾರಣೆಗಾಗಿ ಬಂಧಿಸಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!