ಮಂಡ್ಯ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯಕ್ಕೆ ಬರಗಾಲ ಬಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನಲೆ, ಕೆ.ಆರ್ ಪೇಟೆಯಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ರವರ ಪರವಾಗಿ ಮತಯಾಚಿಸುವ ವೇಳೆ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ, ಕೂಡಲೇ ಕರ್ನಾಟಕಕ್ಕೆ ಬರಗಾಲ ಬರುತ್ತದೆ. ಈ ಬಾರಿಯೂ ಸಿದ್ರಾಮಣ್ಣ ಮುಖ್ಯಮಂತ್ರಿ ಆದರು, ರಾಜ್ಯಕ್ಕೆ ಬರಗಾಲ ಬಂದಿದೆ ಎಂದುರು.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದ ಕೆರೆ ಕಟ್ಟೆಗಳೆಲ್ಲ ತುಂಬಿ ಕೋಡಿ ಒಡೆದು ಹರಿದಿತ್ತು. ಬಳಿಕ ೨೦೧೮ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ಪ್ರವಾಹವೇ ಬಂದಿತ್ತು ಎಂದರು.
ಸಿದ್ರಾಮಣ್ಣ ಬಂದ್ರು ಬರಗಾಲ ರಾಜ್ಯಕ್ಕೆ ಬರಗಾಲ ಕಾಲಿಡ್ತು. ಕೆರೆ-ಕಟ್ಟೆಗಳು ತುಂಬುವುದಿರಲಿ. ಇರುವ ನೀರನ್ನು ಉಳಿಸಿಕೊಳ್ಳುವ ಸ್ಥಿತಿ ಇಲ್ಲದಂತಾಗಿದೆ ಎಂದ ಆರೋಪಿಸಿದರು.