ಮೈಸೂರು: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಯೋಜನೆಯನ್ನು ಶಾಶ್ವತವಾಗಿ ಕೈಬಿಡಬೇಕು ಎಂದು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.
ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯು ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದೆ.
ಬೆಟ್ಟಕ್ಕೆ ರೋಪ್ ವೇ ನಿರ್ವಾಣ ವಾಡುವ ಪ್ರಸ್ತಾಪ ರಾಮಕೃಷ್ಣ ಹೆಗಡೆುಂವರ ಸರ್ಕಾರ ಇದ್ದಾಗಲಿಂದಲೂ ಇದುವರೆಗೆ ಹಲವು ಬಾರಿ ಬಂದಿದ್ದು ಪರಿಸರ ಪ್ರೇಮಿಗಳು ಪರಿಸರ ತಜ್ಞರ ಮತ್ತು ನಾಗರೀಕರ ತೀವ್ರ ವಿರೋಧದ ಕಾರಣದಿಂದ ಚಾಮುಂಡಿ ಬೆಟ್ಟಕ್ಕೆ ಹೋಗಲು ರೋಪ್ ವೇ ಅವಶ್ಯಕತೆ ಇರುವುದಿಲ್ಲ ಎಂದರು.
ಚಾಮುಂಡಿ ಬೆಟ್ಟವನ್ನು ಗಿಜಿಗುಡುವ ಪ್ರವಾಸಿ ತಾಣ ಅಥವಾ ವ್ಯಾಪಾರಿ ಕೇಂದ್ರ ಮಾಡದೆ, ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಸಬೇಕು ಎಂದು ಸಮಿತಿ ಮನವಿ ಮಾಡಿದೆ.
ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್‌ರವರು, ಸಂಸದ ಶ್ರೀನಿವಾಸಪ್ರಸಾದ್, ಶಾಸಕ ಜಿ.ಟಿ. ದೇವೇಗೌಡ, ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಸಾಹಿತಿ ದೇವನೂರ ಮಹಾದೇವ, ಪ್ರಧಾನ ಗುರುದತ್ತ ಹಾಗೂ ಪಂಡಿತ್ ರಾಜೀವ ತಾರಾನಾಥ ಸೇರಿದಂತೆ ಹಲವು ಗಣ್ಯರು, ಸಾಹಿತಿಗಳು ಮತ್ತು ಕಲಾವಿದರು ಬೆಟ್ಟಕ್ಕೆ ರೋಪ್ ವೇ ಬೇಡ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಬದಲಿಗೆ ಗಿಡಗಳನ್ನು ಬೆಳೆಸುವುದು. ಮಳೆ ನೀರು ಕೊಯ್ಲು ಮಾಡುವುದು, ಚರಂಡಿ ನೀರಿನ ಸರಿಯಾದ ನಿರ್ವಹಣೆ ಹಾಗೂ ಜಲಮೂಲಗಳ ಸಂರಕ್ಷಣೆ ಮುಂತಾದ ಪರಿಸರ ಸ್ನೇಹಿ ಸುಸ್ಥಿರ ಅಭಿವೃದ್ಧಿ ಮಾಡಲು ಜನ ಪ್ರತಿನಿಧಿಗಳು ಮತ್ತು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.