Mysore
18
broken clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ರಸ್ತೆ ವಿವಾದ: ರಾಜಮನೆತನಕ್ಕೆ ಅಪಮಾನ ಮಾಡಲ್ಲ ಎಂದ ಶಾಸಕ ಕೆ. ಹರೀಶ್‌ ಗೌಡ

ಮೈಸೂರು: ರಾಜ ಮನೆತನದ ಇತಿಹಾಸವಿರುವ ಮೈಸೂರಿನ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ಸಂಬಂಧ ವಿರೋಧ ವ್ಯಕ್ತವಾಗಿದ್ದು ಯಾವೂದೇ ಕಾರಣಕ್ಕೂ ಮೈಸೂರು ಒಡೆಯರ ಮನೆತನಕ್ಕೆ ಅಪಮಾನ ಮಾಡಲ್ಲ ಎಂದು ಕಾಂಗ್ರೆಸ್‌ ಶಾಸಕ ಹರೀಶ್‌ ಗೌಡ ಹೇಳಿದ್ದಾರೆ.

ಇಂದು (ಜ.6) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿನ್ಸೆಸ್‌ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರ ಮೈಸೂರು ಡಿಸಿ ಹಾಗೂ ನಗರ ಪಾಲಿಕೆ ಕಮಿಷನರ್‌ಗೆ ಪತ್ರ ಬರದು ಈ ರಸ್ತೆಯಲ್ಲಿ ಹಲವಾರು ಆಸ್ಪತ್ರೆಗಳು ನಿರ್ಮಾಣವಾಗಿವೆ ಇದಕ್ಕೆ ಸಿದ್ದರಾಮಯ್ಯ ಕಾರಣ ಆದ್ದರಿಂದ ಅವರ ಹೆಸರಿಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೆ. ಪಾಲಿಕೆಯಿಂದ ಅನುಮೋದನೆ ಸಿಕ್ಕಿದೆ ಆದರೆ ಕೌನ್ಸಿಲ್‌ನಲ್ಲಿ ಅದು ನಿರ್ಧಾರ ಆಗಿಲ್ಲ ಎಂದರು.

ಈ ಕುರಿತು ಆಕ್ಷೇಪಣೆ ಇದ್ದರೆ ತಿಳಿಸಲು ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಇದಕ್ಕೆ ಸಾಮಾಜಿಕ ಕಾರ್ಯಕರ್ತರು, ಬಿಜೆಪಿ ಸಂಸದ ಯದುವೀರ್‌ ಇನ್ನಿತರರು ಪ್ರಿನ್ಸೆಸ್‌ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದು ರಾಜ ಮನೆತನಕ್ಕೆ ಮಾಡುವ ಅವಮಾನ ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸದ ಅವರು, ನಾನು ರಾಜಮನೆತನಕ್ಕೆ ಯಾವುದೇ ಅವಮಾನ ಮಾಡುತ್ತಿಲ್ಲ.ಮೈಸೂರು ಮಹಾರಾಜರು ಈ ರಾಜ್ಯಕ್ಕೆ ನೀಡಿರುವ ಕೊಡುಗೆ ಸೂರ್ಯ-ಚಂದ್ರ ಇರುವವರೆಗೂ ಶಾಶ್ವತ ಎಂದು ಹೇಳಿದರು.

ರಸ್ತೆಯ ವಿಚಾರವಾಗಿ ಮಾತನಾಡಿ, ದಾಸಪ್ಪ ವೃತದಿಂದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದವರೆಗೆ ಮಾತ್ರ ಪ್ರಿನ್ಸೆಸ್‌ ಹೆಸರಿರೋದು ಅಲ್ಲಿಂದ ರಾಯಲ್‌ ಇನ್‌ ಜಂಕ್ಷನ್‌ವರೆಗೆ ಆ ರಸ್ತೆಗೆ ಯಾವುದೇ ಹೆಸರಿಲ್ಲ. ಬೇಕಾದರೆ ಯಾರಾದರೂ ಪರಿಶೀಲನೆ ಮಾಡಲಿ ಎಂದು ಹೇಳಿದರು.

Tags:
error: Content is protected !!