Mysore
22
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ಮೈಸೂರಿನಲ್ಲಿ ಆರ್‌ಸಿಬಿ ಹುಡುಗಿ ಶ್ರೇಯಾಂಕಾ ಪಾಟೇಲ್‌ ಮಸ್ತ್‌ ಡ್ಯಾನ್ಸ್‌

ಮೈಸೂರು: ಕ್ರಿಕೆಟ್‌ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ ಅವರು ಗೌರಿ ಸಿನಿಮಾ ಪ್ರಮೋಷನ್‌ನಲ್ಲಿ ವೇದಿಕೆ ಮೇಲೆ ಮಸ್ತ್‌ ಡ್ಯಾನ್‌ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು, ಹೆಚ್ಚೆಚ್ಚು ಶೇರ್‌ ಹಾಗುತ್ತಿದೆ.

ಶನಿವಾರ(ಮೇ.೨೫) ನಗರದ ಖಾಸಗಿ ಹೋಟೆಲ್‌ ನಲ್ಲಿ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರ ಹೊಸ ಚಿತ್ರದ ಹಾಡು ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ ಯುವನಟ ಸಮರಜಿತ್‌ ಲಂಕೇಶ್‌ ಅವರ ಜೊತೆ ಆರ್‌ಸಿಬಿ ಹುಡುಗಿ ಶ್ರೇಯಾಂಕಾ ಪಾಟೀಲ್‌ ಭರ್ಜರಿ ಸ್ಟೆಪ್ಸ್‌ ಹಾಕಿದ್ದು, ಶ್ರೇಯಾಂಕಾ ನೃತ್ಯಕ್ಕೆ ವ್ಯಾಪಕ ಮೆಚ್ಚು ವ್ಯಕ್ತವಾಗುತ್ತಿದೆ. ಶ್ರೇಯಾಂಕಾ ಅವರು ಕೂಡ ವಿಡಿಯೋವನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ಶ್ರೇಯಾಂಕಾ ವೇದಿಕೆಯಲ್ಲಿ ಕುಣಿಯುತ್ತಿದ್ದಂತೆ ಆರ್.ಸಿ.ಬಿ, ಆರ್‌.ಸಿ.ಬಿ ಎಂದು ಯುವಕರು ಪ್ರೋತ್ಸಾಹ ನೀಡಿದ್ದಾರೆ.

Tags:
error: Content is protected !!