ಮೈಸೂರು : ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಮ್ಮನೊರ್ವ ಅಣ್ಣನನ್ನೇ ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿರುವ ಘಟನೆ ಮೈಸೂರು ತಾಲೂಕಿನ ಆನಂದೂರಿನಲ್ಲಿ ಸೋಮವಾರ (ಸೆ.1) ನಡೆದಿದೆ.
ಮಹೇಶ್ ಹತ್ಯೆಯಾದ (45) ದುರ್ದೈವಿಯಾಗಿದ್ದು, ತಮ್ಮ ರವಿ (43) ಆರೋಪಿಯಾಗಿದ್ದಾನೆ.
ಘಟನೆಯಲ್ಲಿ ತಂದೆ ಕೃಷ್ಣಗೌಡ, ಹಾಗೂ ಅತ್ತಿಗೆ ಲಕ್ಷ್ಮೀ ಅವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಸ್ತಿ ಹಂಚಿಕೆ ಆರೋಪ:
ತಂದೆ ಕೃಷ್ಣಗೌಡ ತನ್ನ ಆಸ್ತಿಯನ್ನು ಮಹೇಶ್ ಹೆಸರಿಗೆ ಬರೆದಿದ್ದು ಇದರಿಂದ ಕುಪಿತಗೊಂಡ ಕಿರಿಯ ಮಗ ರವಿ ಅಣ್ಣ ಮಹೇಶ್ ನನ್ನ ಬರ್ಬರವಾಗಿ ಹತ್ಯೆಗೈದು ಬಳಿಕ ತಂದೆ ಹಾಗೂ ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಘಟನಾ ಸ್ಥಳಕ್ಕೆ ಇಲವಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.





