Mysore
29
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ವೇದಿಕೆ: ಶಾಸಕ ಜಿ.ಟಿ ಹರೀಶ್‌ ಗೌಡ

ಹುಣಸೂರು : ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಶಾಸಕ ಜಿ.ಟಿ ಹರೀಶ್‌ಗೌಡ ಹೇಳಿದರು.

ನಗರದ ಬಜಾರ್ ರಸ್ತೆಯಲ್ಲಿರುವ ಸರ್ಕಾರಿ ಮೌಲಾನ ಆಜದ್ ಮಾದರಿ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಿಂದ ಬಹಳಷ್ಟು ಮಕ್ಕಳು ಬಂದಿದ್ದಾರೆ. ಪ್ರತಿಭಾ ಕಾರಂಜಿಯು ನಮ್ಮ ತಾಲ್ಲೂಕಿನಲ್ಲಿ ಬಹಳ ಯಶಸ್ವಿಯಾಗಿ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಕ್ರಾಸ್ಟರ್ ವಲಯ ಮಟ್ಟದಲ್ಲಿ ನಡೆಯುತ್ತಿದ್ದು,  ಮಕ್ಕಳ ತಮ್ಮ ಪ್ರತಿಭೆಗಳನ್ನು ತೋರಿಸುವ ಕಾರ್ಯಕ್ರಮವೇ ಪ್ರತಿಭಾ ಕಾರಂಜಿಯಾಗಿದೆ ಎಂದರು.

ಶಿಕ್ಷಣ ಎಂದರೆ ಕೇವಲ ಪುಸ್ತಕವಲ್ಲ. ಅದರಿಂದಾಚೆಗೆ ಕಲಿಯುವುದು ಬಹಳಷ್ಟಿದೆ.  ಕ್ರೀಡೆ, ಕಲೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾವು ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕಲೆ, ಸಾಂಸ್ಕೃತಿಕ, ಕ್ರೀಡೆ ಗಳಲ್ಲಿ ಪ್ರತಿಭೆ ಇರುವುದನ್ನು ನೋಡಿದ್ದೇವೆ. ಶಿಕ್ಷಣ ಇಲಾಖೆ  ಹಾಗೂ ಜನಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದಲಿ ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ನಗರಸಭೆ ಸದಸ್ಯ ಮಲ್ಲಿಕ್ ಪಾಷ, ಹರೀಶ್, ಅಕ್ಷರ ದಾಸೋತ್ಸವ ಅಧಿಕಾರಿ ರಾಜೇಂದ್ರ ಕುಮಾರ್, ಬಿ.ಆರ್.ಸಿ. ಹೇಮಲತಾ, ಇ.ಸಿ.ಒ. ಕೇಶವ ಮೂರ್ತಿ, ರಿಜ್ವಾನಾ ಅಫ್ರೋ, ಶಿಕ್ಷಕ ಗೋವೀಂದೇಗೌಡ ಇನ್ನಿತರು  ಹಾಜರಿದ್ದರು.

Tags: