Mysore
26
broken clouds
Light
Dark

ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನನಾದ “ಪ್ರಸಾದ”

ಮೈಸೂರು: ಸ್ವಾಭಿಮಾನಿ ಚಕ್ರವರ್ತಿ, ದಲಿತ, ದಮಿನತರ ಧ್ವನಿಯಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರು ಇಂದು ಲಿಂಗೈಕ್ಯರಾದರು.

ಭಾನುವಾರ ರಾತ್ರಿ ನಿಧನರಾದ ಶ್ರೀನಿವಾಸಪ್ರಸಾದ್ ಅವರ ಅಂತ್ಯಕ್ರಿಯೆಯು ಸಹಸ್ರಾರು ಜನರ ಶೋಕ ಸಾಗರದ ನಡುವೆ ಸಕಲ ಸರ್ಕಾರಿ ಗೌರವ ವಂದನೆ ಹಾಗೂ ಬೌದ್ಧಧರ್ಮದ ವಿಧಿವಿಧಾನಗಳಂತೆ ನಡೆಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ಬೌದ್ಧಧರ್ಮವನ್ನು ಅಪ್ಪಿಕೊಂಡಿದ್ದರಿಂದಾಗಿ ಕುಟುಂಬದವರು ಅವರ ಕನಸಿನಂತೆ ಬೌದ್ಧ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು.

ಅಶೋಕಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ, ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ಅಶೋಕಪುರಂನಲ್ಲಿ ನಡೆದು ಅಲ್ಲಿಂದ ಮಾನಂದವಾಡಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕಲ್ಚರಲ್ ಅಂಡ್ ಎಜುಕೇಷನ್ ಟ್ರಸ್ಟ್ ಆವರಣಕ್ಕೆ ತರಲಾಯಿತು.

ರಾಜ್ಯ,ಮತ್ತು ಕೇಂದ್ರದ ಮಾಜಿ ಸಚಿವರಾಗಿದ್ದರಿಂದ ಬಹಾಗೂ ಹಾಲಿ ಸಂಸದರಾಗಿದ್ದ ಕಾರಣ ಸಕಲ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು.

ಬೆಂಗಳೂರಿನ ತೇರಾ ಮಹಾಬೋದಿ ಸೊಸೈಟಿಯ ಆನಂದ್ ಭಂತೇಜಿ, ಮನೋರಖ್ಖಿತ ಭಂತೇಜಿ ನೇತೃತ್ವದಲ್ಲಿ ಬೌದ್ಧ ಧರ್ಮದ ಬುದ್ಧವಂದನೆ, ಧಮ್ಮ ವಂದನೆ, ಸಂಘ ವಂದನೆ ಸಲ್ಲಿಸಿ ಗೌತಮ ಬುದ್ಧರ ಪಂಚಶೀಲ ಬೋಧನೆ ಮಾಡಲಾಯಿತು. ನಂತರ, ಸುತ್ತಪಠಣ, ಧ್ಯಾನಪಠಣ, ಸೂತ್ರಪಠಣವನ್ನು ಮಣ್ಣು ಮಾಡಲಾಯಿತು.