ಮೈಸೂರು: ನಿಮಗೆಲ್ಲಾ ನನ್ನ ಮನಸ್ಕಾರಗಳು ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಮೋದಿ, ಚೈತ್ರ ನವರಾಯ್ರತಿಯ ಸಂದರ್ಭದಲ್ಲಿ ಚಾಮುಂಡಿ, ಭುವನೇಶ್ವರಿ ಹಾಗೂ ಕಾವೇರಿ ತಾಯಿಯ ಚರಣಗಳಿಗೆ ನಮಸ್ಕರಿಸುತ್ತೇನೆ. ಈ ದೇಶದ ಅತ್ಯಂತ ಹಿರಿಯ ನಾಯಕ ಎಚ್.ಡಿ ದೇವೇಗೌಡರ ಆಶೀರ್ವಾದ ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದೆ. ನಮಗೆ ಇಡೀ ಕರ್ನಾಟಕದ ಆಶೀರ್ವಾದ ಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಹಿರಿಯ ಮತ್ಸದಿ ಎಚ್‌ಡಿಡಿ ಅವರ ಆಶೀರ್ವಾದ ನಮಗೆ ಶ್ರೇಯವಾಗಲಿದೆ. ಪೂರ್ಣ ಕರ್ಣಾಟಕ ಹೇಳುತ್ತಿದೆ ಮತ್ತೊಮ್ಮೆ ಎನ್‌ಡಿಎ ಎಂದು. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಕಲ್ಪ ಪತ್ರ ಮೋದಿಯ ಗ್ಯಾರೆಂಟಿಯಾಗಿದೆ. ಇದರನ್ವಯ ದೇಶದಲ್ಲಿ ಮುಂದಿನ ದಿನಗಳಲ್ಲಿ ಮೂರು ಕೋಟಿ ಮನೆ ನಿರ್ಮಾಣ ಮಾಡಲಾಗುವುದು. ದೇಶಾದ್ಯಂತ ಐದು ವರ್ಷಗಳವರೆಗೆ ಉಚಿತ ಪಡಿತರ ದೊರೆಯಲಿದೆ. ೭೦ ವರ್ಷ ಮೇಲ್ಪಟ್ಟವರೊಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ಮನೆ ಒಡತಿಗೆ ಮೂರು ಕೋಡಟಿ ಮಹಿಳೆಯರನ್ನು ಲಕ್‌ಪತಿ ದೀದಿ ಮಾಡುತ್ತೇವೆ ಇವೆಲ್ಲವೂ ಮೋದಿ ಗ್ಯಾರೆಂಟಿಯಾಗಿದೆ ಎಂದು ಭರ್ಜರಿ ಪ್ರಚಾರ ಮಾಡಿದರು.
ಮೈಸೂರು, ಹಂಪಿ ಹಾಗೂ ಬಾದಾಮಿ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ವರ್ಲ್ಡ್ ಟೂರಿಸಂ ಪಟ್ಟಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ದೇಶದ ಸಮೃದ್ಧಿ ಭಾಷೆವಾಗಿದೆ. ಎನ್‌ಡಿಎ ಏನು ಹೇಳುತ್ತೋ ಅದನ್ನು ಮಾಡಿ ತೋರಿಸುತ್ತದೆ. ತ್ರಿವಳಿ ತಲಾಖ್, ಮಹಿಳೆಯರಿಗೆ ಮೀಸಲಾತಿ, ರಾಮಮಂದಿರ ನಿರ್ಮಾಣ. ಬಿಜೆಪಿಯ ಸಂಕಲ್ಪ ಅದು ಮೋದಿಯ ಗ್ಯಾರಂಟಿ ಆಗಿರುತ್ತದೆ. ಇವೆಲ್ಲಕ್ಕೂ ಶಕ್ತಿ ನಿಮ್ಮ ಮತದಿಂದ ಸಿಗಲಿದೆ. ನಿಮ್ಮ ಪ್ರತಿಯೊಂದು ಮತವು ಮೋದಿಗೆ ಶಕ್ತಿ ನೀಡುತ್ತದೆ. ಎನ್‌ಡಿಎ ಎಚ್‌ಡಿಡಿ ಮಾರ್ಗದರ್ಶನವಿದೆ. ಬಿಎಸ್‌ವೈ ನಾಯಕತ್ವ ಹಾಗೂ ಎಚ್‌ಡಿಕೆ ಚಾಕಚಕ್ಕತೆ ಇವೆಲ್ಲೂ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತುಕ್ಡೆ-ತುಕ್ಡೆ ಗ್ಯಾಂಗ್‌ನ ಸಲ್ತಾನ್ ಆಗಿ ಓಡಾಡುತ್ತಿದೆ. ಇಲ್ಲಿ ದೇಶವನ್ನು ಒಡೆಯುವ, ದೋಚುವ ಕಳ್ಳರಿದಾರೆ. ಕಾಂಗ್ರೆಸ್ ದೇಶದ ವಿರುದ್ಧವೇ ಮಾತನಾಡುತ್ತದೆ. 370 ಆರ್ಟಿಕಲ್ ವಿದಿಯ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಕ್ಷರು ಮಾತನಾಡಿದ್ರು. 370 ಆರ್ಟಿಕಲ್ಗೂ ಕಾಶ್ಮೀರಿಗೂ ಏನು ಸಂಬಂಧ ಎಂದು ಹೇಳಿಕೆ ನೀಡಿದ್ರು. ಭಾರತ ಮಾತೆ ಜೈ ಹೇಳೋಕೆ ಯಾರ ಅನುಮತಿ ಪಡೆಯಬೇಕು ಎನ್ನುತ್ತಾರೆ. ಇಂತವರೊಂದಿಗೆ ನೀವು ನಿಲ್ಲುತ್ತೀರಾ ಎಂದು ಪ್ರಶ್ನಿಸಿದರು.
ಈ ಲೋಕಸಭಾ ಚುನಾವಣೆ ಮುಂದಿನ 5 ವರ್ಷ ಬಹಳ ಮಹತ್ವದ್ದಾಗಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ, ಇದು ಮೋದಿ ಗ್ಯಾರಂಟಿ. ದೇವೇಗೌಡರು ಕೂಡ ಭಾಷಣದಲ್ಲಿ ಗ್ಯಾರಂಟಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಂದಿನ 5 ವರ್ಷಗಳವರೆಗೆ ಉಚಿತ ರೇಷನ್ ನೀಡುತ್ತೇವೆ. 75 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. ಬಡವರಿಗೆ ಹೊಸ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.