ಪಿರಿಯಾಪಟ್ಟಣ : ತಾಲೂಕಿನ ಹುಣಸೇಕುಪ್ಪೆ ಗ್ರಾಮದಲ್ಲಿ ತಂಬಾಕು ಹದಮಾಡುವ ಬ್ಯಾರಾನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರೂ ನಷ್ಟ ಸಂಭವಿಸಿದೆ.
ತಾಲೂಕಿನ ಹುಣಸೇಕುಪ್ಪೆ ಗ್ರಾಮದ ಎಚ್. ಎಸ್. ಕುಮಾರ್ ಎಂಬುವವರಿಗೆ ಸೇರಿದ ತಂಬಾಕು ಬ್ಯಾರಾನ್‌ನಲ್ಲಿ ತಂಬಾಕನ್ನು ಹದ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತೆಗುಲಿದ್ದು ಇದರಿಂದ ಹದಮಾಡಲು ಬ್ಯಾರನ್ ಒಳಗೆ ಇದ್ದ ತಂಬಾಕು ಎಲೆಗಳು, ಬ್ಯಾರನ್‌ಗೆ ಅಳವಡಿಸಿದ್ದ ಪೈಪ್ ಸೆಟ್, ಬ್ಯಾರಾನ್ ಕಡ್ಡಿಗಳು, ಬ್ಯಾರಾನ್ ಮೇಲ್ಚಾವಣಿ ಮತ್ತು ಪೋಲ್ಸ್ ಸೇರಿ ಅಂದಾಜು ಎರಡು ಲಕ್ಷಕ್ಕೂ ಅಧಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಬಿದ್ದ ವಿಷಯ ತಿಳಿದ ಪಿರಿಯಾಪಟ್ಟಣ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ತಂಬಾಕು ಮಂಡಳಿಯ ಕ್ಷೇತ್ರ ಅಧಿಕಾರಿ ಕನ್ನಿಕಾ ಸ್ಥಳಕ್ಕೆ ಆಗಮಿಸಿ ಬೆಂಕಿ ಸಂಭವಿಸಿರುವ ಬ್ಯಾರನನ್ನು ಪರಿಶೀಲನೆ ಮಾಡಿ ವಿಮಾ ಪರಿಹಾರ ನೀಡುವ ಭರವಸೆ ನೀಡಿದರು. ಈಗಾಗಲೇ ಕೆಲವು ತಂಬಾಕು ಬ್ಯಾರನ್ಗಳು ಬೆಂಕಿಗೆ ಆಹುತಿಯಾಗುತ್ತಿದ್ದು ತಂಬಾಕು ಹದಮಾಡುವ ವೇಳೆ ರೈತರು ವೈಜ್ಞಾನಿಕವಾಗಿ ಬ್ಯಾರಾನ್ ನ ಉಷ್ಣಾoಶ ಕಾಪಾಡಿಕೊಂಡು ಹೆಚ್ಚಿನ ಅನಾಹುತ ನೆಡೆಯದಂತೆ ಹೆಚ್ಚರಿಕೆ ವಹಿಸಬೇಕೆಂದು ರೈತರಲ್ಲಿ ವಿನಂತಿ ಮಾಡಿದರು.
ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಎಚ್.ಎಸ್ ಪ್ರಕಾಶ್ ಮಾತನಾಡಿ, ಅತಿಯಾದ ಮಳೆಯಿಂದಾಗಿ ತಂಬಾಕು ಎಲೆಗಳು ಹಣ್ಣಾಗುತ್ತಿದ್ದು ಉತ್ತಮ ದರ್ಜೆಯ ತಂಬಾಕು ಉತ್ಪತ್ತಿಯಾಗದೆ ರೈತರು ನಷ್ಠ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಹದ ಮಾಡುವ ಬ್ಯಾರನ್‌ಗಳು ಬೆಂಕಿಗೆ ಆಹುತಿಯಾಗುತ್ತಿರುವುದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕ ಸಿಬ್ಬಂದಿ, ಹುಣಸೇಕುಪ್ಪೆ ಗ್ರಾಮಸ್ಥರು ಹಾಗೂ ರೈತರು ಇದ್ದರು.