Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ನೆರವಾದ ಆರ್‌.ಧ್ರುವನಾರಾಯಣ್‌ ಅಭಿಮಾನಿ ಬಳಗದ ಸದಸ್ಯರು

ಎಚ್.ಡಿ.ಕೋಟೆ: ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಕಳಸೂರು ಗ್ರಾಮದ ನಿವಾಸಿ ಅನಿಲ್‌ ಎಂಬುವವರಿಗೆ ಆರ್.ಧ್ರುವನಾರಾಯಣ್‌ ಅಭಿಮಾನಿ ಬಳಗದ ಸದಸ್ಯರು ಧನ ಸಹಾಯ ಹಾಗೂ ಆಹಾರ ಕಿಟ್‌ ವಿತರಣೆ ಮಾಡಿದರು.

ಕಳಸೂರು ಗ್ರಾಮದ ಅನಿಲ್‌ ಎಂಬುವವರು ಕಳೆದ ಕೆಲ ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಜೀವನಕ್ಕೆ ಆಸರೆಯಾದ ಮಗನಿಗೆ ಈ ರೀತಿ ಅನಾರೋಗ್ಯ ಕಾಡುತ್ತಿದೆ ಎಂದು ಪೋಷಕರು ತೀವ್ರ ದುಃಖದಲ್ಲಿದ್ದರು.

ವಿಷಯ ತಿಳಿದು ಅನಿಲ್‌ ಮನೆಗೆ ಭೇಟಿ ನೀಡಿದ ಆರ್.ಧ್ರುವನಾರಾಯಣ್‌ ಅಭಿಮಾನಿ ಬಳಗದ ಸದಸ್ಯರು, ಧನ ಸಹಾಯ ಹಾಗೂ ಆಹಾರ ಕಿಟ್‌ ವಿತರಣೆ ಮಾಡಿದರು.

ಈ ವೇಳೆ ಆರ್.ಧ್ರುವನಾರಾಯಣ್‌ ಬಳಗದ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಕಾರ್ಯದರ್ಶಿ ಮಂಜು ಮುಳ್ಳೂರು, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌, ನಾಗರಾಜ್‌ ಉಯ್ಯಂಬಳ್ಳಿ ಸೇರಿದಂತೆ ಹಲವರು ಹಾಜರಿದ್ದರು.

 

Tags: