ನಂಜನಗೂಡು: ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆ ಮಾಡಿ ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಮೇಲೆ ಮೊದಲ ಬಾರಿಗೆ ಬೆಂಗಳೂರಿಗೆ ಬರುವುದರಿಂದ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ನಂಜನಗೂಡು ವಿಧಾನಸಭಾ ಕ್ಷೇತ್ರದ ಪಕ್ಷದ ಟಿಕೆಟ್ ವಿಷಯದ ಬಗ್ಗೆ ಚರ್ಚಿಸಿದರು.
ಐವತ್ತು ವರ್ಷ ಹಿಂದೆ ನಿಜಲಿಂಗಪ್ಪ ಅಧ್ಯಕ್ಷರಾಗಿದ್ದರು ನಂತರ ದಿನದಲ್ಲಿ ಚುನಾವಣೆಯ ಮೂಲಕ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಪಕ್ಷಕ್ಕೆ ಹೆಚ್ಚಿನ ಬಲಬಂದಂತೆ ಆಗಿದೆ ಹೊಸ ಸಂಚಲನ ಮೂಡಿದೆ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವುದು ರಾಜ್ಯ ಮತ್ತು ದೇಶ ಎಮ್ಮೆ ಪಡುವ ವಿಷಯ ವಾಗಿದೆ ಎಂದರು ಪಕ್ಷಕ್ಕೆ ಮುಂದಿನ ಚುನಾವಣೆಗಳಿಗೆ ಇವರ ನಾಯಕತ್ವ ದೊಡ್ಡ ಶಕ್ತಿಯಾಗಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತ ಪಕ್ಷದವರು ದೇಶದಲ್ಲಿ ಕೋಮುವಾದ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಕೃಷಿ ಗ್ರಾಮೀಣಾಭಿವೃದ್ಧಿ ಅಲ್ಪಸಂಖ್ಯಾತರ ವಿಷಯದಲ್ಲಿ ಅಭಿವೃದ್ಧಿ ಮಾಡುವಲ್ಲಿ ಹಿಂದೆ ಸರಿದಿದ್ದಾರೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಸರ್ವಾಧಿಕಾರಿ ಧೋರಣೆ, ಅಧಿಕಾರ ಮಾಡುತ್ತಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಶೂನ್ಯವಾಗಿದೆ.
ಈ ಕ್ಷೇತ್ರದಲ್ಲಿ ಈ ಬಾರಿ ನಿಮ್ಮ ಬೆಂಬಲಿಗರು ನಿಮ್ಮನ್ನೇ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದವರು ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ಸಿದ್ಧಾಂತವಿದೆ ನಾನು ರಾಜಕೀಯ ಮಾಡುತ್ತಿರುವುದು ಅಭಿವೃದ್ಧಿಗೋಸ್ಕರ ಅಧಿಕಾರಕ್ಕೆ ಅಲ್ಲ ಈ ಕ್ಷೇತ್ರದಲ್ಲಿ ನಾನು ಕೂಡ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಕ್ಷೇತ್ರದ ಜನ ಯಾರಿಗೆ ಹೇಳುತ್ತಾರೋ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಅಂದರೆ ಚಳುವಳಿ ನಾನು ಸೇರಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಕೆಲಸ ಮಾಡಬೇಕು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಬದಲಾವಣೆ ಉಂಟಾಗಿದೆ ಇವರು ಜಾತಿ ಕೋಮುವಾದ ಪರ ರಾಜಕೀಯ ಮಾಡಿದವರು ಅಲ್ಲ ಸರ್ವತೋಮುಖವಾಗಿ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಿಕೊಂಡು ಪಕ್ಷವನ್ನು ಬೆಳೆಸಿದವರು ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಹೊಸ ಸಂಚಲನ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ಬುಲೆಟ್ ಮಾದೇವಪ್ಪ ಇಂಧನ ಬಾಬು, ಮೂಗ್ ಶೆಟ್ಟಿ, ಕೆಂಪಣ್ಣ, ಬಸವಗೌಡ ,ನಾಸೀರ್, ಚಾಮರಾಜ್, ನಟರಾಜ್ ಪಿ, ಶ್ರೀನಿವಾಸ್ ಸ್ವಾಮಿ, ಸಿದ್ದೇಶ್, ಶ್ರೀನಿವಾಸ್ ,ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.





