Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸಂಸತ್ ಅಧಿವೇಶನ: ಎಎಪಿಯ ಮತ್ತೊಬ್ಬ ಸಂಸದ ಸುಶೀಲ್ ಕುಮಾರ್ ರಿಂಕು ಅಮಾನತು

ನವದೆಹಲಿ: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಎಎಪಿ ಸಂಸದ ಸುಶೀಲ್ ಕುಮಾರ್ ರಿಂಕು ಅವರನ್ನು ಮುಂಗಾರು ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸಿದ್ದಾರೆ.

ಲೋಕಸಭೆಯು ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ, 2023 ಅನ್ನು ಅಂಗೀಕರಿಸುತ್ತಿದ್ದಂತೆ, ಇದನ್ನು ವಿರೋಧಿಸಿ ರಿಂಕು ಅವರು ಸದನದ ಬಾವಿಗಿಳಿದು ಕೆಲವು ಕಾಗದಗಳನ್ನು ಹರಿದು ಸ್ಪೀಕರ್ ಓಂ ಬಿರ್ಲಾ ಅವರತ್ತ ಎಸೆದರು.

ಮಸೂದೆಯನ್ನು ಅಂಗೀಕರಿಸಿದ ನಂತರ, ಬಿರ್ಲಾ ಅವರು ಸದನದಲ್ಲಿ ರಿಂಕು ಅವರ ನಡವಳಿಕೆಯನ್ನು ಆಕ್ಷೇಪಿಸಿದರು ಮತ್ತು ಎಎಪಿ ಸಂಸದನ ಅಮಾನತಿಗೆ ನಿರ್ಣಯ ಮಂಡಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸೂಚಿಸಿದರು.

ನಂತರ ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರದ ಸಂಸದ ರಿಂಕು ಅವರನ್ನು ಮುಂಗಾರು ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸುವ ನಿರ್ಣಯವನ್ನು ಪ್ರಲ್ಹಾದ್ ಜೋಶಿ ಅವರು ಮಂಡಿಸಿದರು.

ರಿಂಕು ಅವರು, ಮಣಿಪುರ ಹಿಂಸಾಚಾರದ ವಿಚಾರದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ರಾಜ್ಯಸಭೆಯ ಎಎಪಿ ಸದಸ್ಯ ಸಂಜಯ್ ಸಿಂಗ್ ಅವರನ್ನು ಮೇಲ್ಮನೆಯಿಂದ ಅಮಾನತುಗೊಳಿಸಿದ ನಂತರ ಸಂಸತ್ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಂಡ ಎರಡನೇ ಎಎಪಿ ಸದಸ್ಯರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ