ಮೈಸೂರು : ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೈಸೂರಿನ ನಿವಾಸಿಗಳು ಸುರಕ್ಷಿತವಾಗಿದ್ದಾರೆ.
ಮೈಸೂರು ಮೂಲದವರಾದ 10 ಮಂದಿ ಕಾಶ್ಮೀರ ಹಾಗೂ ಶ್ರೀನಗರಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಸದ್ಯ ಅಲ್ಲಿನ ಟ್ರೇಡೆಂಟ್ ಹೋಟೆಲ್ ನಲ್ಲಿ ಉಳಿದುಕೊಂಡಿರುವ ಅವರು ಸುರಕ್ಷಿತವಾಗಿದ್ದಾರೆ.
ಏಪ್ರಿಲ್ 28ಕ್ಕೆ ವಾಪಸ್ ಬರಬೇಕಿದ್ದ ಮೈಸೂರಿನ ಪ್ರವಾಸಿಗರು ಕಾಶ್ಮೀರ ಉಗ್ರ ದಾಳಿ ಹಿನ್ನಲೆ ಪ್ರವಾಸ ಮೊಟಕುಗೊಳಿಸಿದ್ದಾರೆ. ಈಗಾಗಲೇ ಪ್ರವಾಸಿಗರನ್ನು ಭೇಟಿ ಮಾಡಿರುವ ಸಚಿವ ಸಂತೋಷ್ ಲಾಡ್ ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಕೈಗೊಂಡಿದ್ದಾರೆ.





