Mysore
26
scattered clouds
Light
Dark

ನಂಜನಗೂಡು| ಪಡಿತರ ಚೀಟಿಗೆ ಈ-ಕೆವೈಸಿ ಕಡ್ಡಾಯ

ಮೈಸೂರು: ನಂಜನಗೂಡು ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಗಳಲ್ಲಿರುವ ಸದಸ್ಯರು ಈ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ತಾಲ್ಲೂಕಿನ ವ್ಯಾಪ್ತಿಯ 8827 ಪಡಿತರ ಚೀಟಿದಾರರ ಸದಸ್ಯರು ತಮ್ಮ ಪಡಿತರ ಚೀಟಿಗೆ ಈವರೆವಿಗೂ ಈ-ಕೆವೈಸಿ ಮಾಡಿಸಿಕೊಳ್ಳದಿರುವುದು ಕಂಡುಬಂದಿದ್ದು, ಆಗಸ್ಟ್ 31 ರೂಳಗೆ ಈ-ಕೆವೈಸಿ ಮಾಡಿಸಿಕೊಳ್ಳಲು ಅಂತಿಮ ಗಡುವು ನೀಡಲಾಗಿರುತ್ತದೆ.

ಈ-ಕೆವೈಸಿ ಬಾಕಿ ಇರುವ ಪಡಿತರ ಚೀಟಿಗಳ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಈ-ಕೆವೈಸಿ ಮಾಡಿಸಿಕೊಳ್ಳುವಂತೆ ಸೂಚಿಸಿದ್ದು, ಆಗಸ್ಟ್-31 ರೂಳಗೆ ಮಾಡಿಸಿಕೊಳ್ಳದಿದ್ದಲ್ಲಿ ಅಂತಹ ಪಡಿತರ ಚೀಟಿದಾರರ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗುವುದು ಎಂದು ನಂಜನಗೂಡು ತಾಲೂಕಿನ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.