Mysore
15
few clouds

Social Media

ಸೋಮವಾರ, 05 ಜನವರಿ 2026
Light
Dark

ಮೈಸೂರು ವಿ.ವಿ ನಿವೃತ್ತ ಪ್ರಾದ್ಯಾಪಕ ವಿ.ಕೆ. ನಟರಾಜ್‌ ನಿಧನ

ಮೈಸೂರು:ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ನಿರ್ದೇಶಕರೂ ಆಗಿದ್ದ ಪ್ರೊ.ವಿ.ಕೆ. ನಟರಾಜ್‌ (85) ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ನಿವೃತ್ತಿ ನಂತರ ಚೆನ್ನೈನ ಮದ್ರಾಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಡೆವಲಪ್‌ಮೆಂಟ್‌ ಸ್ಟಡೀಸ್‌ (MIDS) ನ ನಿರ್ದೇಶಕರಾಗಿದ್ದರು. ಬಳಿಕ ಇಂಡೊ-ಕೆನೆಡಿಯನ್‌ ಸ್ಟಡಿ ಸೆಂಟರ್ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಅಭಿವೃದ್ದಿ ಅರ್ಥಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದು, ಮೂರು ದಶಕಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಾಪಕ ಜೀವನವನ್ನು ನಡೆಸಿದ್ದಾರೆ. ನಂತರ ಅಭಿವೃದ್ದಿ ಅಧ್ಯಯನ ವಿಭಾಗದ ಮುಖ್ಯಸ್ಥರು ಆಗಿದ್ದರು.

ಅರ್ಥಶಾಸ್ತ್ರ ಕುರಿತು ಇಂಗ್ಲಿಷ್‌ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದರು. ವರ್ಲ್ಡ್‌ ಬ್ಯಾಂಕಿನ ಸಲಹೆಗಾರರಾಗಿದ್ದ ಇವರು ಖ್ಯಾತ ಸರೋಜ ವಾದಕ ಪಂ. ತಾರಾನಾಥರ ಆತ್ಮೀಯರೂ ಆಗಿದ್ದರು.

ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ಅಂತಿಮ ನಮನ ಸಲ್ಲಿಸಲು ಮಂಗಳವಾರ (ಡಿ.10) ಬೆಳಿಗ್ಗೆ ಅವರ ನಿವಾಸದಲ್ಲಿ ಇರಿಸಲಾಗುವುದು. ನಂತರ ಬೆಳಿಗ್ಗೆ 11ಕ್ಕೆ ಜೆಎಸ್‌ಎಸ್‌ ಅಸ್ಪತ್ರೆಗೆ ದಾನವಾಗಿ ನೀಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:
error: Content is protected !!